ನವದೆಹಲಿ : ನಿಯಂತ್ರಣ ತಪ್ಪಿ XUV 700 ಕಾರು ಕಂದಕಕ್ಕೆ ಬಿದ್ದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ವೇನಲ್ಲಿ ನಡೆದಿದೆ. ಮೃತರನ್ನು ಮುಂಬೈನ ಕುರ್ಲಾದ ಗುಲಾಮ್ ರಸೂಲ್ (70), ಅಬ್ದುಲ್ ಗುಲಾಮ್ (35), ಡ್ಯಾನಿಶ್ (15), ದುರ್ಗೇಶ್ ಪ್ರಸಾದ್ (35) ಹಾಗೂ ವಡೋದರಾದ ಖಾಲಿಸ್ (35) ಎಂದು ಗುರುತಿಸಲಾಗಿದೆ.
ನ.13ರಂದು ಬೆಳಿಗ್ಗೆ 7ಗಂಟೆ ಸುಮಾರಿಗೆ ದೆಹಲಿ ಹಾಗೂ ಮುಂಬೈ ಎಕ್ಸ್‌ಪ್ರೆಸ್ ವೇಯಲ್ಲಿನ ಭೀಮಪುರ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. MHO3 EL 1388 ನಂಬರಿನ ಕಾರು ದೆಹಲಿಯಿಂದ ಗುಜರಾತ್ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ್ದು, ಪರಿಣಾಮ ಕಾರು ಕಂದಕಕ್ಕೆ ಬಿದ್ದಿದೆ.
ಕಾರು ಕಂದಕಕ್ಕೆ ಬಿದ್ದ ದೃಶ್ಯ ಸ್ಥಳದಲ್ಲೇ ಇದ್ದ ಸಿಸಿಟವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೇಗವಾಗಿ ಬಂದ ಕಾರು ಡಿವೈಡರ್ ದಾಟಿ, ರಸ್ತೆಯ ಮಧ್ಯೆಯಲ್ಲಿದ್ದ ಮಾಹಿ ನದಿಯ ಕಂದಕಕ್ಕೆ ಉರುಳಿದೆ. ಪರಿಣಾಮ ಕಾರಿನ ಮುಂಭಾಗ ಹಾಗೂ ಮೇಲ್ಭಾಗ ನಜ್ಜುಗುಜ್ಜಾಗಿದ್ದು, ನಂಬರ್ ಪ್ಲೇಟ್ ಅಪಘಾತದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ. ಅವಘಡದಲ್ಲಿ ಓರ್ವ ಬಾಲಕ ಸೇರಿ ಐವರು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಹೊರತೆಗೆಯಲು ಸ್ಥಳೀಯರು ಪೊಲೀಸರಿಗೆ ಸಹಾಯ ಮಾಡಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ : ಬಾಲಿವುಡ್‌ನ ಹಿರಿಯ ನಟಿ ಕಾಮಿನಿ ಕೌಶಲ್ ನಿಧನ



















