ಹಾಸನ : ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆ, ಬಣ ಬಡಿದಾಟ, ಕುರ್ಚಿ ಫೈಟ್ ನಡುವೆ ಸೈಲೆಂಟ್ ಆಗಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಗುಟ್ಟಾಗಿ ಬಂದು ನಾಗೇಶ್ವರನ ಆಶೀರ್ವಾದ ಪಡೆದಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ನವಿಲೆ ಗ್ರಾಮದಲ್ಲಿ ಇರುವ ನಾಗೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಭದ್ರತೆ ಇಲ್ಲದೆ ಖಾಸಗಿ ಕಾರಿನಲ್ಲಿ ಬಂದು, ನಾಗದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ವಾರದ ಹಿಂದೆ ದೇವಾಲಯದ ಕಾರ್ಯಕ್ರಮಕ್ಕೆ ಭಕ್ತರು, ಡಿಕೆಶಿಗೆ ಆಹ್ವಾನ ನೀಡಿದ್ದರು. ಆದರೆ ಇಂದು ದೇವಾಲಯಕ್ಕೆ ದಿಢೀರ್ ಭೇಟಿ ನೀಡಿದ್ದಾರೆ.
ಈ ಹಿಂದೆ ಸಿಎಂ ಆಗುವ ಮೊದಲು ಮಾಜಿ ಸಿಎಂ ಯಡಿಯೂರಪ್ಪ ನಾಗೇಶ್ವರನ ಆಶೀರ್ವಾದ ಪಡೆದಿದ್ದರು. ಸದ್ಯ, ಡಿಕೆಶಿ ಖಾಸಗಿಯಾಗಿ ಬಂದು ನಾಗೇಶ್ವರ ಆಶೀರ್ವಾದ ಪಡೆದಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.



















