ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಶಾಸಕ ಮುನಿರತ್ನ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಲ್ಲಿ 2000 ಕೋಟಿ ಭ್ರಷ್ಟಾಚಾರವಾಗಿದೆ ಎಂದು ದೂರು ಸಲ್ಲಿಸಿದ್ದಾರೆ.
ಈ ಕುರಿತು ಮುನಿರತ್ನ ಲೋಕಾಯುಕ್ತ, ಸಿಬಿಐ, ಇಡಿಗೆ ದೂರು ಸಲ್ಲಿಸಿದ್ದಾರೆ. ಆಂಧ್ರದ ಜೆಎಂಸಿ ಕನ್ಸ್ಟ್ರಕ್ಷನ್‌ಗೆ 1768 ಕೋಟಿ ಪ್ಯಾಕೇಜ್ ನ ಕಾರ್ಯಾದೇಶ ನೀಡಲು ಬೆಂಗಳೂರು ನಗರಾಭಿವೃದ್ಧಿ ಸಚಿವರು ತಯಾರಿ ನಡೆಸಿದ್ದಾರೆ. 15 ಪರ್ಸೆಂಟ್ ಕಮಿಷನ್ ಅನ್ನು ಗುತ್ತಿಗೆದಾರರು, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಮೂಲಕ ಮುಂಗಡ ನೀಡಿದ್ದಾರೆ. ಇದರಲ್ಲಿ ನೇರ ಪಾತ್ರ ಇರುವುದು ಡಿಸಿಎಂ ಡಿ.ಕೆ.ಶಿವಕುಮಾರ್, ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರದ್ದು ಎಂದು ಮುನಿರತ್ನ ದೂರು ಸಲ್ಲಿಸಿದ್ದಾರೆ.
ಕೇವಲ ಐದು ವಾರ್ಡ್ ಹೊಂದಿರುವ ಯಶವಂತಪುರಕ್ಕೆ 232 ಕೋಟಿ ಹಂಚಿಕೆ ಮಾಡಲಾಗಿದೆ. ಕಾಂಗ್ರೆಸ್ ಮುಖಂಡ ಸ್ಟಾರ್ ಚಂದ್ರು ಮಾಲೀಕತ್ವದ ಸ್ಟಾರ್ ಬಿಲ್ಡರ್ಸ್ ಕಂಪನಿಗೆ 232 ಕೋಟಿ ರೂ. ಮೊತ್ತದ ಟೆಂಡರ್ ನೀಡಲು ತಯಾರಿ ನಡೆದಿದೆ ಎಂದು ಆರೋಪಿಸಿದ್ದಾರೆ.
ಕಾಮಗಾರಿಗಳ ಗುತ್ತಿಗೆ ನೀಡಿಕೆ ಸ್ಥಳೀಯ ಗುತ್ತಿಗೆದಾರರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಹೀಗಾಗಿ ರಾಜ್ಯದ ಗುತ್ತಿಗೆದಾರರು ಬೇರೆ ರಾಜ್ಯದ ಶ್ರೀಮಂತ ಗುತ್ತಿಗೆದಾರರ ಗುಲಾಮರಾಗುತ್ತಿದ್ದಾರೆ ಎಂದು ಕೂಡ ಅವರು ಆಕ್ರೋಶ ಹೊರ ಹಾಕುತ್ತಿದ್ದಾರೆ.