ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಉಪಚುನಾವಣೆ ಹಿನ್ನೆಲೆಯಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಮಹಿಳೆಯರು ಹಾಗೂ ವಿಶೇಷ ಚೇತನರಿಗಾಗಿ ‘ಪಿಂಕ್ ಮತಗಟ್ಟೆ’ಗಳನ್ನು ಸ್ಥಾಪಿಸಲಾಗಿದೆ.
ಮಹಿಳೆಯರು ಹಾಗೂ ವಿಶೇಷ ಚೇತನರ ಅನುಕೂಲಕ್ಕಾಗಿ ನಿರ್ಮಿಸಲಾದ ಈ ಪಿಂಕ್ ಮತಗಟ್ಟೆಗಳನ್ನು ‘ಸಖಿ ಮತಗಟ್ಟೆ ಕೇಂದ್ರ’ ಎಂದು ಕರೆಯಲಾಗುತ್ತಿದೆ. ಶಿರಾಮಗೊಂಡನಹಳ್ಳಿ ಗ್ರಾಮದಲ್ಲಿ ಒಂದು ಪಿಂಕ್ ಮತಗಟ್ಟೆ ಸ್ಥಾಪಿಸಲಾಗಿದ್ದು, ಮತ್ತೊಂದು ಮತಗಟ್ಟೆ DRR ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಒಟ್ಟಾರೆ ದಾವಣಗೆರೆ ಕ್ಷೇತ್ರದಲ್ಲಿ ಎರಡು ಪಿಂಕ್ ಮತಗಟ್ಟೆಗಳು ಕಾರ್ಯನಿರ್ವಹಿಸುತ್ತಿದ್ದು, ಮಹಿಳಾ ಮತದಾರರಿಗೆ ಸುಲಭ ಹಾಗೂ ಸುರಕ್ಷಿತ ಮತದಾನ ವಾತಾವರಣ ಕಲ್ಪಿಸುವುದಕ್ಕೆ ಸಹಾಯವಾಗಿದೆ.
ಇದನ್ನೂ ಓದಿ : ಉಪಚುನಾವಣೆಯ ರಣರಂಗ : ಇಂದು ದಾವಣಗೆರೆ –ಬಾಗಲಕೋಟೆಯಲ್ಲಿ ಮತದಾನ, ಯಾರಿಗೆ ವಿಜಯಲಕ್ಷ್ಮಿ?


















