ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಹೋಟೆಲ್‌ಗಳು ಮತ್ತು ಡಾಬಾಗಳ ಮೇಲೆ ಗೃಹಬಳಕೆ ಸಿಲಿಂಡರ್ ಬಳಕೆ ಕುರಿತು ದಾಳಿ ನಡೆಸಲಾಗಿದೆ. ಘಟನೆ ಆನಗೋಡು ಪ್ರದೇಶದ ಹೋಟೆಲ್‌ಗಳು ಮತ್ತು ಡಾಬಾಗಳಲ್ಲಿ ನಡೆದಿದೆ.
ಈ ದಾಳಿ ದಾವಣಗೆರೆ ತಹಶೀಲ್ದಾರ್ ಅಶ್ವಥ್ ನೇತೃತ್ವದಲ್ಲಿ ನಡೆದಿದೆ. ಅಧಿಕಾರಿಗಳು 20ಕ್ಕೂ ಅಧಿಕ ಹೋಟೆಲ್ ಹಾಗೂ ಡಾಬಾಗಳ ಮೇಲೆ ದಾಳಿ ನಡೆಸಿ, 40ಕ್ಕೂ ಅಧಿಕ ವಿವಿಧ ಕಂಪನಿಯ ಸಿಲಿಂಡರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಿದ ತಹಶೀಲ್ದಾರ್ ಅಶ್ವಥ್ ಅವರ ತಂಡ ಕಾರ್ಯಾಚರಣೆ ನಡೆಸಿದೆ. ಇನ್ನೂ ತನಿಖೇ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಬೆಳಗಾವಿಯಲ್ಲಿ 2 ಲಾರಿಗಳ ಮಧ್ಯೆ ಭೀಕರ ಅಪಘಾತ : ಓರ್ವ ಸ್ಥಳದಲ್ಲೇ ಸಾವು



















