ಕೊಪ್ಪಳ : ಮದುವೆಯಾದ ಎರಡು ತಿಂಗಳೊಳಗೆ ಸೊಸೆ ನಾಪತ್ತೆಯಾಗಿದ್ದು, ಮನನೊಂದ ಮಾವ ಹೃದಯಾಘಾತದಿಂದ ಸಾವನ್ನಪ್ಪಿರುವ ಮನಕಲಕುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕಳೆದ ಮಾ. 21ರಂದು ನಾಗರಾಜ್ ಎಂಬಾತನ ಪತ್ನಿ ಸಂಜನಾ ಮನೆಯಿಂದ ನಾಪತ್ತೆಯಾಗಿದ್ದಾಳೆ. ಸೊಸೆ ಮನೆ ಬಿಟ್ಟು ಹೋದ ದಿನವೇ ನಾಗರಾಜ್ ತಂದೆ ಖಂಡೆಪ್ಪ ಮಾನಸಿಕವಾಗಿ ನೊಂದ ಕಾರಣ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಮೂಲತಃ ಕೊಪ್ಪಳದ ಗೌರಿ ಅಂಗಳ ನಿವಾಸಿ ನಾಗರಾಜ್ ಮತ್ತು ರಾಯಚೂರ ಜಲ್ಲೆಯ ಸಿಂಧನೂರು ನಿವಾಸಿ ಸಂಜನಾ ಫೆಬ್ರವರಿ 8ರಂದು ಹಿರಿಯರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದರು.
ಇದೇ ಮಾ. 21ರಂದು ಗಂಡ ನಾಗರಾಜ್‌ನನ್ನ ಮೆಡಿಕಲ್ ಶಾಪ್‌ಗೆ ಕಳಸಿ ಸಂಜನಾ ನಾಪತ್ತೆಯಾಗಿದ್ದಾರೆ. ಬಳಿಕ ಸಂಜನಾಳಿಗಾಗಿ ಗಂಡ ನಾಗರಾಜ್ ಹಾಗೂ ಸಹೋದರ ರವಿ, ಕೊಪ್ಪಳ, ರಾಯಚೂರು, ಹೊಸಪೇಟೆ, ಹುಲಗಿ ಎಲ್ಲಾ ಕಡೆ ಅಲೆದಾಡಿ ಹುಡುಕಾಡಿದ್ದರು. ಆದರೆ, ಪತ್ನಿ ಸಿಗದ ಕಾರಣ ಇದೀಗ ನಾಗರಾಜ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಊರೂರು ಅಲೆದರೂ ಸಂಜನಾ ಸಿಗದ ಕಾರಣ ಪತ್ನಿಯನ್ನು ಹುಡುಕಿ ಕೊಡುವಂತೆ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಗರಾಜ್ ದೂರು ನೀಡಿದ್ದಾರೆ. ಸಂಜನಾ ಕೈಯಲ್ಲಿ ರವಿ ಎಂದು ಟ್ಯಾಟೂ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : ಬೆಳಗಾವಿಯಲ್ಲಿ ಬಸ್ ಹತ್ತುವ ವೇಳೆ ಚಕ್ರದಡಿ ಸಿಲುಕಿದ ಮಗು – ಗಂಭೀರ ಗಾಯ!



















