ಇತ್ತೀಚೆಗಷ್ಟೇ ದರ್ಶನ್ ಅಭಿನಯದ ಇದ್ರೆ ನೆಮ್ದಿಯಾಗ್ ಇರ್ಬೆಕ್ ಹಾಡು ಬಿಡುಗಡೆಯಾಗಿ ಭಾರೀ ವೀವ್ಸ್ ಪಡೆಯುತ್ತಿದೆ. ದರ್ಶನ್ ಭಕ್ತಗಣವಂತೂ ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಆದರೆ, ಈಗ ಈ ಹಾಡಿಗೆ ಕೃತಿಚೌರ್ಯದ ಆರೋಪ ಎದುರಾಗುತ್ತಿದೆ.

2015ರಲ್ಲಿ ಬಿಡುಗಡೆಯಾಗಿದ್ದ ನಾನು ಅವನಲ್ಲ ಅವಳು ಚಿತ್ರದ ವಾರೆ ವಾರೆ ಹಾಡಿನ ನಕಲು ಈ ಇದ್ರೆ ನೆಮ್ದಿಯಾಗ್ ಇರ್ಬೇಕ್ ಹಾಡು ಎನ್ನುವುದು ಹಲವರ ಆರೋಪವಾಗುತ್ತಿದೆ. ಈ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ವಾರೆ ವಾರೆ ಹಾಡಿಗೂ ಈ ಹಾಡಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ಹಲವರು ವಾದಿಸುತ್ತಿದ್ದಾರೆ. ಹಾಗಾದರೆ ಇದ್ರೆ ನೆಮ್ದಿಯಾಗ್ ಇರ್ಬೇಕ್ ಹಾಡು ವಾರೆ ವಾರೆ ಹಾಡಿನ ನಕಲಾ? ಎರಡೂ ಹಾಡು ಕೇಳಿ ನೀವೇ ನಿರ್ಧರಿಸಿ…



















