ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಇತರ ಆರೋಪಿಗಳ ವಿರುದ್ಧ ದೋಷಾರೋಪಣೆಯಾಗಿದ್ದು, ಆರೋಪಿಗಳು ಇದನ್ನು ಒಪ್ಪಿಕೊಂಡಿಲ್ಲ. ಇದೆಲ್ಲವೂ ಸುಳ್ಳು ಎಂದು ಕೋರ್ಟ್ನಲ್ಲಿ ಹೇಳಿದ್ದಾರೆ. ಇದರ ಮಧ್ಯೆ ದರ್ಶನ್ ವಕೀಲರನ್ನು ಕೂಡಾ ಬದಲಾಯಿಸಲು ಹೊರಟಿದ್ದಾರೆ.

ಹೀಗಿರುವಾಗ ದೋಷಾರೋಪಣೆ ನಂತರ ಮುಂದೇನು ಅನ್ನುವ ಪ್ರಶ್ನೆ ಮೂಡಿದೆ. ದೋಷಾರೋಪಣೆ ಮಾಡಿದ ನಂತರ ಆರೋಪಿಗಳು ಅದನ್ನು ಒಪ್ಪಿಕೊಂಡರೆ ಕೋರ್ಟ್ ಶಿಕ್ಷೆ ಪ್ರಕಟ ಮಾಡುತ್ತದೆ. ಒಪ್ಪಿಕೊಳ್ಳದಿದ್ದರೆ ಸಾಕ್ಷಿ ಎದುರಿಟ್ಟು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.
ಸದ್ಯ ನಟ ದರ್ಶನ್ ಅಭಿಮಾನಿಗಳು ಆತಂಕದಲ್ಲಿದ್ದಾರೆ. ನಟನಿಗೆ ಶಿಕ್ಷೆಯಾಗಬಹುದಾ ಎನ್ನುವ ಭಯದಲ್ಲಿದ್ದಾರೆ. ಹೀಗಿರುವಾಗಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಇಂದು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಸುಂದರವಾದ ಪೋಸ್ಟ್ ಶೇರ್ ಮಾಡಿದ್ದಾರೆ. ನಟ ದರ್ಶನ್ ಪತ್ನಿ ಬ್ಲ್ಯಾಕ್ ರೇಂಜ್‌ರೋವರ್ ಕಾರಿನ ಮುಂದೆ ನಿಂತು ಪೋಸ್ ಕೊಟ್ಟಿದ್ದಾರೆ.

ವಿಜಯಲಕ್ಷ್ಮಿ ಅವರು ಬ್ಲ್ಯಾಕ್ ಬ್ಯಾಗಿ ಪ್ಯಾಂಟ್ ಧರಿಸಿದ್ದು ವೈಟ್ ಟೀ ಶರ್ಟ್ ಧರಿಸಿದ್ದಾರೆ. ಹಾಗೆಯೇ ಬ್ಲ್ಯಾಕ್ ಗಾಗಲ್ಸ್ ಧರಿಸಿಕೊಂಡು ಕ್ಯಾಮೆರಾಗೆ ಸಖತ್ ಪೋಸ್ ಕೊಟ್ಟಿದ್ದಾರೆ. ಒಂದೇ ಸಲ ಸರಣಿ ಫೋಟೋಗಳನ್ನು ಅಪ್ಲೋಡ್ ಮಾಡಿರುವ ವಿಜಯಲಕ್ಷ್ಮಿ ಅವರು, ಇಂದು ಏನೇ ನಡೆದರೂ ಅಥವಾ ಎಷ್ಟೇ ಕೆಟ್ಟದಾಗಿ ಕಂಡರೂ, ಜೀವನ ಮುಂದುವರಿಯುತ್ತದೆ ಮತ್ತು ನಾಳೆ ಅದು ಉತ್ತಮವಾಗಿರುತ್ತದೆ ಎಂದು ಅಡಿಬರಹ ಬರೆದಿದ್ದಾರೆ.

ಇದನ್ನೂ ಓದಿ : ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಕೂಗಿಗೆ ಸ್ಪಂದಿಸಿದ ಸಿಎಂ | ನಾಳೆ ಸಭೆ ಕರೆದ ಸಿದ್ಧರಾಮಯ್ಯ



















