ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ ಗೆ ಬೆನ್ನು ನೋವು ಹೆಚ್ಚಾಗಿದೆ. ಇನ್ನೊಂದೆಡೆ ಜಾಮೀನಿಗಾಗಿ ಪರದಾಡುತ್ತಿದ್ದಾರೆ. ಹೀಗಾಗಿ ಅವರು ಶುಕ್ರವಾರ ರಾತ್ರಿ ನಿದ್ದೆ ಮಾಡಿಲ್ಲ ಎನ್ನಲಾಗಿದೆ.
ಈಗ ಅವರಿಗೆ ಕುಳಿತುಕೊಳ್ಳಲು ಹಾಗೂ ನಿಲ್ಲಲು ಆಗುತ್ತಿಲ್ಲ. ಪೇನ್ ಕ್ಯೂಲರ್ ಮಾತ್ರ ತೆಗೆದುಕೊಂಡರು ನೋವು ಮಾತ್ರ ಕಡಿಮೆಯಾಗುತ್ತಿಲ್ಲ. ಹೀಗಾಗಿ ಅವರು ಬೆನ್ನು ನೋವಿನ ಸರ್ಜರಿಗೆ ಒಳಗಾಗಲೇ ಬೇಕಾಗಿದೆ. ಸರ್ಜರಿ ಮಾಡಿಸದಿದ್ದರೆ ಕಷ್ಟ ಎಂದು ವೈದ್ಯರು ಹೇಳುತ್ತಿದ್ದಾರೆ. ದರ್ಶನ್ ಮಾತ್ರ ಬಳ್ಳಾರಿಯಲ್ಲಿ ಮಾಡಿಸಿಕೊಳ್ಳುವುದಿಲ್ಲ ಎನ್ನುತ್ತಿದ್ದಾರೆ. ಬೆಂಗಳೂರಿನಲ್ಲೇ ಮಾಡಿಸಿಕೊಳ್ಳುತ್ತೇನೆಂದು ಪಟ್ಟು ಹಿಡಿದಿದ್ದಾರೆ.
ಆದರೆ, ಹೆಚ್ಚು ಕಡಿಮೆ ಆದರೆ ತಮ್ಮ ಮೇಲೆ ಬರಬಾರದು ಎಂಬ ಕಾರಣಕ್ಕೆ ಜೈಲು ಅಧಿಕಾರಿಗಳು ಸುಮ್ಮನಾಗಿದ್ದಾರೆ ಎನ್ನಲಾಗಿದೆ.