ನಾನು ನನ್ನ ಜನ್ಮ ಇರುವವರೆಗೂ ದರ್ಶನ್ (Darshan)ಅವರನ್ನು ಮರೆಯುವುದಿಲ್ಲ ಎಂದು ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಹೇಳಿದ್ದಾರೆ.
‘ಬುಲ್ ಬುಲ್’ ಅಂತ ತಮಗೆ ಟೈಟಲ್ ನೀಡಿದ್ದಕ್ಕೆ ದರ್ಶನ್ಗೆ ಯಾವಾಗಲೂ ಋಣಿ ಆಗಿರುತ್ತೇನೆ. ನನ್ನ ಜೀವ ಇರುವವರೆಗೂ ನಾನು ‘ಬುಲ್ ಬುಲ್’ (Bul Bul) ಆಗಿಯೇ ಇರುತ್ತೇನೆ ಎಂದು ಹೇಳಿದ್ದಾರೆ.
‘ಭರ್ಜರಿ ಬ್ಯಾಚುಲರ್ ಸೀಸನ್ 2’ನಲ್ಲಿ ರಕ್ಷಕ್ ಬುಲೆಟ್ ಅವರು ದರ್ಶನ್ ‘ಬುಲ್ ಬುಲ್’ ಚಿತ್ರದ ಸ್ಟೈಲ್ ಕಾಪಿ ಮಾಡಿದ್ದಾರೆ. ಇದನ್ನು ನೋಡಿ ರಚಿತಾ ರಾಮ್ ಖುಷಿಯಾಗಿದ್ದಲ್ಲದೆ, ಅದ್ಭುತ ನಟನೆಗೆ ಬೆನ್ನು ತಟ್ಟಿದ್ದಾರೆ. ವೇಳೆ ತಮ್ಮ ಬುಲ್ ಬುಲ್ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ದರ್ಶನ್ ಸೇರಿದಂತೆ ‘ಬುಲ್ ಬುಲ್’ ಸಿನಿಮಾ ತಂಡಕ್ಕೆ ಧನ್ಯವಾದ ಹೇಳಿದ ರಚಿತಾ ರಾಮ್, ದರ್ಶನ್ ಅವರ ಎಲ್ಲ ಸಿನಿಮಾಗಳು ಹೀರೋ ಬೇಸ್ ಹೆಸರುಗಳಿರುತ್ತವೆ. ಆದರೆ ಫಸ್ಟ್ ಟೈಮ್ ಹೀರೋಯಿನ್ ಬೇಸ್ ಟೈಟಲನ್ನು ‘ಬುಲ್ ಬುಲ್’ಗೆ ಇಡಲಾಗಿತ್ತು. ಅದನ್ನು ದರ್ಶನ್ ಕೂಡ ಹೇಳಿದ್ದರು ಎಂದು ರಚಿತಾ ನೆನಪು ಮಾಡಿಕೊಂಡು ಸಂತಸ ಪಟ್ಟಿದ್ದಾರೆ.
ನನ್ನ ಉಸಿರಿರುವವರೆಗೂ ನನ್ನನ್ನು ‘ಬುಲ್ ಬುಲ್’ ಅಂತ ಕರೆದರೆ ನನಗೆ ಖುಷಿ ಎಂದು ರಚಿತಾ ಹೇಳಿದ್ದಾರೆ. ಈ ವೇಳೆ, ದರ್ಶನ್ ಅಭಿಮಾನಿಗಳಿಗೆ ನಮಸ್ಕಾರ ಮಾಡಿ ತಮ್ಮ ಧನ್ಯವಾದ ಎಂದು ಭಾವುಕವಾಗಿಯೇ ಹೇಳಿದ್ದಾರೆ.