ಬೆಂಗಳೂರು: ಕೊಲೆ ಆರೋಪದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದಿರುವ ನಟ ದರ್ಶನ್(darshan) ಕುಟುಂಬಸ್ಥರೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಈಗ ಅವರ ಸಹೋದರ ದಿನಕರ್ ತೂಗುದೀಪ ರಾಯಲ್ ಚಿತ್ರಕ್ಕೆ ಸಾಥ್ ನೀಡಿದ್ದಾರೆ.
ಸೋಮವಾರ ರಾತ್ರಿ ಕುಟುಂಬ ಸಮೇತರಾಗಿ ರಾಯಲ್ ಚಿತ್ರ ವೀಕ್ಷಿಸಿದ್ದಾರೆ. ಈ ವೇಳೆ ದರ್ಶನ್ ಜೊತೆ ಸಹೋದರ ದಿನಕರ್ ತೂಗುದೀಪ, ತಾಯಿ ಇದ್ದರು.
ಜಯಣ್ಣ ನಿರ್ಮಾಣದ ದಿನಕರ್ ನಿರ್ದೇಶನದ ವಿರಾಟ್(virat) ಅಭಿನಯದ ಚಿತ್ರ ಕಂಡು ದರ್ಶನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಯಲ್ ಚಿತ್ರ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ರಿಲೀಸ್ ಗೂ ಮುನ್ನ ನಟ ದರ್ಶನ್ ಚಿತ್ರ ವೀಕ್ಷಇಸಿದ್ದಾರೆ. ಜೈಲಿಂದ ಹೊರ ಬಂದ ನಂತರ ದರ್ಶನ್ ವೀಕ್ಷಿಸಿದ ಮೊದಲ ಚಿತ್ರ ಇದಾಗಿದೆ.