ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ (Darshan) ಪರಪ್ಪನ ಅಗ್ರಹಾರದಲ್ಲಿ ಐಷಾರಾಮಿ ಬದುಕು ಸಾಗಿಸುತ್ತಿದ್ದದ್ದು ಸಾಬೀತಾಗುತ್ತಿದ್ದಂತೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಆದರೆ, ಈ ನಿರ್ಧಾರಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಬೇಸರ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದಕ್ಕೆ ಪತ್ನಿ ವಿಜಯಲಕ್ಷ್ಮೀ ಸೇರಿದಂತೆ, ಕುಟುಂಬಸ್ಥರು ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ದರ್ಶನ್ ರನ್ನು ಬಳ್ಳಾರಿಗೆ (Bellary Jail) ಶಿಫ್ಟ್ ಮಾಡಲು ಕೋರ್ಟ್ ಆದೇಶ ನೀಡಿದ ನಂತರ, ಇಂದು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಅಲ್ಲಿಗೆ ಬರುತ್ತಿದ್ದಂತೆ ಸ್ವತಃ ದರ್ಶನ್ ಕೂಡ ಬೇಸರಿಸಿಕೊಂಡಂತೆ ಕಂಡಿತು.
ಈಗ ಪತಿ ದರ್ಶನ್ ಅವರು ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿಂದ ಬಳ್ಳಾರಿಗೆ ಶಿಫ್ಟ್ ಆಗುತ್ತಿದ್ದಂತೆ ತೀವ್ರ ಬೇಸರಗೊಂಡಿದ್ದಾರೆ. ಅವರು ಯಾವುದೇ ಕರೆ ಸ್ವೀಕರಿಸುತ್ತಿಲ್ಲ ಎನ್ನಲಾಗಿದೆ. ಆಪ್ತರ ಬಳಿ ಈ ಬಗ್ಗೆ ಬಹಳಷ್ಟು ಬೇಸರ ಹೊರಹಾಕಿದ್ದಾರೆ ಎನ್ನಲಾಗಿದೆ. ವಿಜಯಲಕ್ಷ್ಮಿ ಮಾತ್ರವಲ್ಲ, ದರ್ಶನ್ ಸಹೋದರ ದಿನಕರ್ ತೂಗುದೀಪ ಕೂಡ ಈ ಕುರಿತು ಬೇಸರಿಸಿಕೊಂಡಿದ್ದಾರೆ.
ದಿನಕರ್ ತೂಗುದೀಪ ಈ ಕುರಿತು ಮಾತನಾಡಿ, ಬಳ್ಳಾರಿಗೆ ಶಿಫ್ಟ್ ಮಾಡಿರುವುದು ತುಂಬಾ ನೋವು ತಂದಿದೆ. ಬಳ್ಳಾರಿಗೆ ಹೋಗಲು ಏಳೆಂಟು ಕಾಲ ಪ್ರಯಾಣ ಮಾಡಬೇಕು. ಇಲ್ಲೇ ಇದ್ದಿದ್ದರೆ ಹೋಗಿ ನೋಡಲು ತುಂಬಾ ಅನುಕೂಲವಾಗುತ್ತಿತ್ತು ಎಂದು ಹೇಳಿದ್ದಾರೆ.
ಇನ್ನು ಮುಂದೆ ದರ್ಶನ್ ಕುಟುಂಬಸ್ಥರು ಬಳ್ಳಾರಿಗೆ ಹೋಗಬೇಕಾಗಿದೆ. ಪರಪ್ಪನ ಅಗ್ರಹಾರದಲ್ಲಿ ಈ ಮೊದಲು ಇದ್ದ ರೇಣುಕಾಸ್ವಾಮಿ ಕೊಲೆ ಕೇಸ್ ನ ಆರೋಪಿಗಳನ್ನು ಮೈಸೂರು ಸೇರಿದಂತೆ ಹಲವು ಕಡೆ ಶಿಫ್ಟ್ ಮಾಡಲಾಗಿದೆ. ದರ್ಶನ್ ಅಷ್ಟೇ ಅಲ್ಲದೇ, ಈ ಪ್ರಕರಣದ ಇನ್ನಿತರ ಆರೋಪಿಗಳ ಕುಟುಂಬಸ್ಥರು ಕೂಡ ಇದರಿಂದಾಗಿ ಪರದಾಟ ನಡೆಸುವಂತಾಗಿದೆ. ಹೀಗಾಗಿ ಎಲ್ಲ ಆರೋಪಿಗಳ ಕುಟುಂಬಸ್ಥರು ಬೇಸರಿಸಿಕೊಂಡಿದ್ದಾರೆ ಎನ್ನಲಾಗಿದೆ.