ಕೊಲೆ ಪ್ರಕರಣದ ಆರೋಪಿ ದರ್ಶನ್ ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆದರೆ, ಈಗ ಮತ್ತೆ ಜೈಲು ಸೇರುವ ಆತಂಕ ವ್ಯಕ್ತವಾಗುತ್ತಿದೆ.
ಇಂದು ದರ್ಶನ್ ಸೇರಿದಂತೆ ಏಳು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಷರತ್ತು ಬದ್ದ ಜಾಮೀನು ನೀಡಿದೆ. ಬಟ್ಟೆಗಳಲ್ಲಿ ರಕ್ತದ ಕಲೆ, ಮೊಬೈಲ್ ಸಿಡಿಆರ್ ವಿವರ ಸೇರಿದಂತೆ ಸಾಕ್ಷಿ ವಿಚಾರಣೆ ನಂತರವಷ್ಟೇ ನಿರ್ಣಯಕ್ಕೆ ಬರಲು ಸಾಧ್ಯ ಎಂದಿರುವ ಕೋರ್ಟ್, ಗ್ರೌಂಡ್ಸ್ ಆಫ್ ಅರೆಸ್ಟ್ ಬಗ್ಗೆ ಹೆಚ್ಚಿನ ಒತ್ತು ನೀಡಿದೆ. ಗ್ರೌಂಡ್ಸ್ ಆಫ್ ಅರೆಸ್ಟ್ ಸರಿಯಾಗಿಲ್ಲದಿದ್ದರೆ ಜಾಮೀನು ನೀಡಬಹುದು ಎಂಬ ದರ್ಶನ್ ಆಂಡ್ ಗ್ಯಾಂಗ್ ಗೆ ಜಾಮೀನು ನೀಡಲಾಗಿದೆ. ಹೀಗಾಗಿ ದರ್ಶನ್ ಗೆ ಆತಂಕ ಶುರುವಾಗಿದೆ.
ಜಾಮೀನು ಮಂಜೂರಾಗಿದ್ದರೂ ಟೆನ್ಷನ್ ನಲ್ಲೇ ಇರಬೇಕಾದ ಸ್ಥಿತಿ ದಾಸನಿಗೆ ಎದುರಾಗಿದೆ. 6 ವಾರಗಳ ಅವಧಿಗೆ ಅನಾರೋಗ್ಯದ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದಿದ್ದರೂ ಸರ್ಜರಿ ಮಾಡಿಸಿಕೊಳ್ಳದಿರುವುದೇ ಸಂಕಷ್ಟ ತಂದಿಡುವ ಸಾಧ್ಯತೆಯಿದೆ.
ದರ್ಶನ್ ಗೆ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್ ಆದೇಶ ಪ್ರಶ್ನಿಸಿ ಪೊಲೀಸರು ಸುಪ್ರೀಂಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ. 6 ವಾರಗಳ ನಂತರವೂ ಸರ್ಜರಿ ಮಾಡಿಸಿಕೊಂಡಿಲ್ಲ ಎಂದು ದರ್ಶನ್ ನಡೆ ಬಗ್ಗೆ ಪೊಲೀಸರ ಪರ SPP ಸುಪ್ರೀಂಕೋರ್ಟ್ನಲ್ಲಿ ವಾದಮಂಡನೆ ಮಾಡಲಿದ್ದಾರೆ. ಹೀಗಾಗಿ ದರ್ಶನ್ ಗೆ ಆತಂಕ ಶುರುವಾಗಿದೆ.


















