ದರ್ಶನ್ ಯಾವಾಗಲೂ ನನ್ನ ಮಗ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಮಂಡ್ಯ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದರ್ಶನ್ ಪತ್ನಿ ವಿಜಯಲಕ್ಷ್ಮೀಯೊಂದಿಗೆ ಸಂಪರ್ಕದಲ್ಲಿದ್ದೇನೆ. ದರ್ಶನ್ಗೆ ಒಳ್ಳೆಯದಾಗಬೇಕು. ಅವರು ನಿರಪರಾಧಿ ಅಂತ ಸಾಬೀತಾಗಬೇಕು ಎಂಬುವುದು ನಮ್ಮ ಆಸೆ ಎಂದಿದ್ದಾರೆ.
ಅವರು ನಮ್ಮ ಕುಟುಂಬದ ಭಾಗ. ಈಗ ದರ್ಶನ್ ಗೆ ಚಿಕಿತ್ಸೆ ನಡೆಯುತ್ತಿದೆ. ಹೀಗಾಗಿ ದರ್ಶನ್ ಮೊದಲು ವಿಶ್ರಾಂತಿ ಪಡೆದು ಆರೋಗ್ಯ ಸುಧಾರಿಸಿಕೊಳ್ಳಲಿ ಎಂದಿದ್ದಾರೆ.
ಅಲ್ಲದೇ, ಅವರು ಆನಂತರ ಕಾನೂನಿನ ಸವಾಲು ಎದುರಿಸಿ ಅವರು ಹೊರಬರಬೇಕು ಎಂಬುವುದು ನಮ್ಮೆಲ್ಲರ ಆಸೆ. ದರ್ಶನ್ ಯಾವಾಗಲೂ ನನ್ನ ಮಗ. ನನ್ನ ಜೀವ ಇರುವವರೆಗೂ ದರ್ಶನ್ ನನ್ನ ಮಗನೇ. ನಮ್ಮ ಸಂಬಂಧ ಹಾಗೆಯೇ ಇರುತ್ತದೆ.