ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಗೆ ಜಾಮೀನಿನ ಆತಂಕ ಶುರುವಾಗಿದೆ. ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಿಂದಾಗಿ ಜೈಲಿನಲ್ಲಿ ಆತಂಕದಿಂದಲೇ ದಿನ ಕಳೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣದ 17 ಆರೋಪಿಗಳ ಪೈಕಿ ಮೂವರಿಗೆ ಜಾಮೀನು ಸಿಕ್ಕಿದ್ದು ದರ್ಶನ್‌ಗೆ ಸ್ವಲ್ಪ ನಿರಾಳ ತಂದಿದೆ. ಹೀಗಾಗಿ ತಮಗೂ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದಾರೆ. ಇದೇ ತಿಂಗಳು 4 ನೇ ತಾರೀಖು ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಜಾಮೀನು ಸಿಗವ ನಿರೀಕ್ಷೆಯಲ್ಲಿದ್ದಾರೆ. ಈ ವಿಷವಾಗಿ ದರ್ಶನ್, ಫೋನ್ ನಲ್ಲಿ ಪತ್ನಿಯೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಪತ್ನಿಯೊಂದಿಗೆ ಫೋನ್ ನಲ್ಲಿ ಮಾತನಾಡಿದ ನಂತರ ದರ್ಶನ್ ರಿಲ್ಯಾಕ್ಸ್ ಆಗಿದ್ದಾರೆ ಎನ್ನಲಾಗುತ್ತಿದೆ. ಈಗ ದರ್ಶನ್ ಜೈಲಿನಲ್ಲಿ ಪುಸ್ತಕ ಓದುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಯಾರೆಲ್ಲ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಯಾವ ಹಂತದಲ್ಲಿ ಜಾಮೀನು ಅರ್ಜಿ ವಿಚಾರಣೆಗಳಿವೆ. ಎಲ್ಲದರ ಬಗ್ಗೆ ದರ್ಶನ್ ಮಾಹಿತಿ ಪಡೆದಿದ್ದಾರೆ. ಜೊತೆಗೆ ತನ್ನ ಜಾಮೀನು ವಿಚಾರ ಎಲ್ಲಿಗೆ ಬಂತು ಅನ್ನೊದರ ಬಗ್ಗೆಯೂ ಚರ್ಚಿಸಿದ್ದಾರೆ ಎನ್ನಲಾಗಿದೆ. ದಿಂಬು, ಬೆಡ್ ಗಾಗಿ ದಿನವು ಕಿರಿಕಿರಿ ಮಾಡುತ್ತಿದ್ದ ದರ್ಶನ್ ಈಗ ಸುಮ್ಮನೆ ಮಲಗುತ್ತಿದ್ದಾರೆ ಎನ್ನಲಾಗಿದೆ.