ನಟ ದರ್ಶನ್ (Darshan) ಥಾಯ್ಲೆಂಡ್ ನಲ್ಲಿ ಜಾಲಿ ಮೂಡ್ ನಲ್ಲಿದ್ದಾರೆ. ಎಲ್ಲ ಜಂಜಡ ಹಾಗೂ ಒತ್ತಡ ಮರೆತು ಥಾಯ್ಲೆಂಡ್ ನಲ್ಲಿ ಸುತ್ತಾಡುತ್ತಿದ್ದಾರೆ.
ಥಾಯ್ಲೆಂಡ್ ನಲ್ಲಿ ಸಿನಿಮಾದ ಹಾಡಿನ ಚಿತ್ರೀಕರಣ ಮುಕ್ತಾಯವಾಗಿದ್ದು, ದರ್ಶನ್ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಥಾಯ್ಲೆಂಡ್‌ನ ಫುಕೆಟ್, ಬ್ಯಾಂಕಾಕ್‌ನಲ್ಲಿ ʻಡೆವಿಲ್ʼ ಚಿತ್ರದ ಹಾಡಿನ ಚಿತ್ರೀಕರಣ ನಡೆದಿದೆ. 10 ದಿನಕ್ಕಾಗಿ ದರ್ಶನ್ ವಿದೇಶಕ್ಕೆ ತೆರಳಿದ್ದರು. ಇದೇ ಮಂಗಳವಾರ ದರ್ಶನ್ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ (Supreme Court) ಸಲ್ಲಿಸಲಾಗಿದ್ದ ಅರ್ಜಿ ವಿಚಾರವಾಗಿ ಆದೇಶ ಹೊರಬೀಳಲಿದ್ದು, ದರ್ಶನ್ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.
ದರ್ಶನ್ ಥಾಯ್ಲೆಂಡ್‌ನಲ್ಲಿ (Thailand) ಸ್ನೇಹಿತರ ಜೊತೆ ಆರಾಮಾಗಿ ಇರುವ ಒಂದಷ್ಟು ಫೋಟೋಗಳು ಕೂಡ ಈಗ ವೈರಲ್ ಆಗಿವೆ.



















