ಯಾದಗಿರಿ: ಈಗಾಗಲೇ ನಟ ದರ್ಶನ್ ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾನೆ. ಇನ್ನೊಂದೆಡೆ ದರ್ಶನ್ ನ ಕೆಲವು ಅಭಿಮಾನಿಗಳ ಹಾವಳಿ ಕೂಡ ಮಿತಿ ಮೀರುತ್ತಿದೆ.
ನಟ ದರ್ಶನ್ (Actor Darshan) ಅವರ ಅಭಿಮಾನಿಯೊಬ್ಬ ಪಂಚರ್ ಅಂಗಡಿಯಲ್ಲಿ ಕೆಲಸ ಮಾಡುವ ಯುವಕನಿಗೆ ಜೀವ ಬೆದರಿಕೆ (Life Threatening Case) ಹಾಕಿದ್ದಾನೆ ಎನ್ನಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿ (Yadgir) ಪೊಲಿಸರು ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಜು ಎಂಬಾತನನ್ನ ವಶಕ್ಕೆ ಪಡೆದಿದ್ದಾರೆ.
ಗಂಗಾ ನಗರದ ನಿವಾಸಿ ಅಭಿ ಎಂಬ ಯುವಕನಿಗೆ ದರ್ಶನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ರಾಜು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ರಾಜು, ಬಾಸ್ ಬಗ್ಗೆ ಮಾತನಾಡಿದ್ರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಅಭಿಯು ಬಾಸ್ ಬಾಸ್ ಎಂದು ಬಕೆಟ್ ಯಾಕೆ ಹಿಡಿತೀರಿ, ತಾಯಿ-ತಂದೆಗೆ ಬಕೆಟ್ ಹಿಡಿಯಿರಿ ಎಂದು ಇನ್ಸ್ಟಾಗ್ರಾಮ್‍ನಲ್ಲಿ ಸ್ಟೇಟಸ್ ಹಾಕಿದ್ದ. ಇದರಿಂದ ಸಿಟ್ಟಿಗೆದ್ದ ರಾಜು, ಅಭಿಗೆ ಕರೆ ಮಾಡಿ, ವೀಡಿಯೋ ಡಿಲೀಟ್ ಮಾಡದೇ ಇದ್ರೆ ಜೀವಂತ ಸುಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಕುರಿತು ಆಡಿಯೋ ವೈರಲ್ ಆಗಿದೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.