ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಮನೆ ಊಟ ಕೊಡಿ ಎಂದು ಪದೇ ಪದೇ ಮನವಿ ಮಾಡುತ್ತಿದ್ದಾರೆ. ಈಗಾಗಲೇ ದರ್ಶನ್ ಮನೆಯೂಟಕ್ಕಾಗಿ ಪತ್ರ ಬರೆದು ಮನವಿ ಮಾಡಿದ್ದಾರೆ.
ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಹತ್ತಿರ ಮನೆ ಊಟ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ಈ ಅರ್ಜಿ ತಿರಸ್ಕರಿಸಲ್ಪಟ್ಟಿದೆ. ಈ ನಿಟ್ಟಿನಲ್ಲಿ ದರ್ಶನ್ ಅಧಿಕಾರಿಗಳಿಗೆ ಜೈಲೂಟ ಬೇಕೆಂದು ಮನವಿ ಮಾಡಿದ್ದಾರೆ. ಈ ಮಧ್ಯೆ ‘ಆ ದಿನಗಳು’ ಚೇತನ್ ಅವರು ಜೈಲೂಟ ಹೊಗಳಿ ಮಾತನಾಡಿದ್ದಾರೆ. ‘ನಂಗೆ ಜೈಲೂಟ ಸಖತ್ ಇಷ್ಟ’ ಎಂದು ಹೇಳುವುದರ ಮೂಲಕ ದರ್ಶನ್ ಮನವಿಗೆ ವ್ಯಂಗ್ಯವಾಡಿದ್ದಾರೆ.
ದರ್ಶನ್ ಅರೆಸ್ಟ್ ಆಗುತ್ತಿದ್ದಂತೆ ಸೆಲೆಬ್ರಿಟಿಗಳು ಹಲವಾರು ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಹಲವರು ದರ್ಶನ್ ಪರ ನಿಂತರೆ ಇನ್ನೂ ಹಲವರು ದರ್ಶನ್ ವಿರುದ್ಧ ಗುಡುಗುತ್ತಿದ್ದಾರೆ. ದರ್ಶನ್ ಮಾಡಿರುವುದು ಸರಿಯಲ್ಲ ಎಂದು ಟೀಕೆ ಮಾಡುತ್ತಿದ್ದಾರೆ. ಈ ಸಾಲಿಗೆ ಈಗ ನಟ ಚೇತನ್ ಬಂದಿದ್ದಾರೆ.
‘ಜೈಲೂಟು ನನಗೆ ಸಖತ್ ಇಷ್ಟ. ನನ್ನ ಹುಟ್ಟು ಹಬ್ಬದ ದಿನ ನಾನು ಜೈಲಿನಲ್ಲಿದ್ದೆ. ಆ ದಿನ ಪುಳಿಯೋಗರೆ ಕೊಟ್ಟಿದ್ದರು. ಆ ಪುಳಿಯೋಗರೆ ನನಗೆ ಸಖತ್ ಇಷ್ಟ. ನನಗೆ ಏನು ಕೊಟ್ಟರೂ ಅದನ್ನು ತಿನ್ನುತ್ತಿದ್ದೆ. ಅಲ್ಲಿಯ ಊಟ ನನಗೆ ಸಮಸ್ಯೆ ಮಾಡಲಿಲ್ಲ. ಬೇರೆಯವರಿಗೆ ಕಷ್ಟ ಆದರೆ ಅದು ಅವರು ಅಭ್ಯಾಸ ಮಾಡಿಕೊಂಡಿದ್ದು ಎದು ವ್ಯಂಗ್ಯವಾಡಿದ್ದಾರೆ.
ದರ್ಶನ್ ರನ್ನು ಎರಡ್ಮೂರು ಬಾರಿ ಮಾತ್ರ ಭೇಟಿ ಮಾಡಿದ್ದೆ. ನ್ಯಾಯಾಲಯದ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ಈ ಪ್ರಕರಣದಲ್ಲಿ ಪೊಲೀಸರು ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂದು ಹೇಳಿದ್ದಾರೆ.