ದರ್ಶನ್ ಜೈಲು ಭಾಗ್ಯದ ಭವಿಷ್ಯ ಜುಲೈ 22ರಂದು ಇತ್ಯರ್ಥವಾಗಲಿದೆ. ಈ ನಡುವೆ, ನಟನ ಪರ ವಕಾಲತ್ತು ವಹಿಸಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಪ್ರಕರಣದಿಂದ ಹಿಂದೆ ಸರಿದಿದ್ದಾರೆ.
ಸಿಂಘ್ವಿ ಪುತ್ರ ರಾಜ್ಯ ಸರ್ಕಾರದ ಪ್ರಕರಣವನ್ನು ಮುನ್ನಡೆಸುತ್ತಿರುವುದರಿಂದಾಗಿ ಸಿಂಘ್ವಿ ಈ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ, ದರ್ಶನ್ ಪ್ರಕರಣದಲ್ಲಿ ಅವರ ಪರ ಮುಂದಿನ ಬಾರಿ ಮತ್ತೋರ್ವ ಹಿರಿಯ ವಕೀಲ ಕಪಿಲ್ ಸಿಬಲ್ ಕಣಕ್ಕಿಳಿಯಲಿದ್ದಾರೆ.
ಸಿಂಘ್ವಿಯಿಂದ ತೆರವಾದ ಸ್ಥಾನಕ್ಕೀಗ ಕಪಿಲ್ ಸಿಬಲ್ ರನ್ನು ದರ್ಶನ್ ನೇಮಕ ಮಾಡಿಕೊಂಡಿದ್ದಾರೆ. ಈ ನಡುವೆ, ದರ್ಶನ ಬಂಧನಕ್ಕೆ ಕಾರಣವೇನು ಅನ್ನೋದನ್ನು ಪ್ರಶ್ನಿಸಿದ್ದ ಸುಪ್ರೀಂಕೋರ್ಟ್ ಗೆ ರಾಜ್ಯ ಸರ್ಕಾರ ಇದೀಗ ಸಂಪೂರ್ಣ ವಿವರಣೆಯನ್ನು ನೀಡಿದೆ. ಹೀಗಾಗಿ ಜುಲೈ 22ರಂದು ನಡೆಯುವ ವಿಚಾರಣೆ ದರ್ಶನ್ ಪಾಲಿಗೆ ನಿರ್ಣಾಯಕವಾಗಿರಲಿದೆ. ಅಷ್ಟೇ ಅಲ್ಲಾ ಅಂದು ದರ್ಶನ್ ಪರ ಕಪಿಲ್ ಸಿಬಲ್ ಕೋರ್ಟ್ ನಲ್ಲಿ ಹಾಜರಾಗಲಿದ್ದಾರೆ. ಸರ್ಕಾರ ಸುಪ್ರೀಂ ಪ್ರಶ್ನೆಗೆ ಉತ್ತರ ನೀಡಿರುವುದರಿಂದಾಗಿ ಅಂದೇ ಬೇಲ್ ಭವಿಷ್ಯದ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆಗಳಿವೆ.