ಬೆಂಗಳೂರು: ನಟ ದರ್ಶನ್ ವಾಮನ ಚಿತ್ರದ ಟ್ರೈಲರ್ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ವೇಳೆ ಚಿತ್ರದಲ್ಲಿನ ಮುದ್ದು ರಾಕ್ಷಸಿ ಹಾಡು ಇಷ್ಟಪಟ್ಟು, ತಮ್ಮ ಪತ್ನಿಗೂ ಹಾಗೆ ಕರೆಯುವುದಾಗಿ ಹೇಳಿದ್ದಾರೆ.
ನಟ ಧನ್ವೀರ್ ಗೌಡ (Dhanveer Gowda) ‘ವಾಮನ’ನಾಗಿ ಏಪ್ರಿಲ್ 10ರಿಂದ ನಿಮ್ಮ ಮುಂದೆ ಬರಲಿದ್ದಾನೆ. ಚಿತ್ರ ಉತ್ತಮವಾಗಿ ಮೂಡಿ ಬಂದಿದ್ದು, ನಿಮ್ಮ ಬೆಂಬಲ ಇರಲಿ. ಎಲ್ಲೆಡೆ ಯಶಸ್ವಿಯಾಗಿ ಅಬ್ಬರಿಸಲಿ ಎಂದು ಆಶಿಸುತ್ತೇನೆ. ಒಳ್ಳೆಯ ಕನ್ನಡ ಸಿನಿಮಾಗಳಿಗೆ ನಮ್ಮ ಸೆಲೆಬ್ರಿಟಿಗಳ ಪ್ರೋತ್ಸಾಹ ಎಂದಿನಂತೆ ಸದಾ ಬೆನ್ನೆಲುಬಾಗಿ ನಿಂತರಲಿ’ ಎದು ದರ್ಶನ್ ಹೇಳಿದ್ದಾರೆ.
ಅಲ್ಲದೇ, ದರ್ಶನ್ (Darshan) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ‘ವಾಮನ’ ಟ್ರೇಲರ್ (Vaamana Movie Trailer) ಬಗ್ಗೆ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಧನ್ವೀರ್ ಅವರನ್ನು ಬೇರೆ ಬೇರೆ ರೀತಿ ನೋಡಿದ್ದೇನೆ. ‘ಬಜಾರ್’ ಸಿನಿಮಾದಲ್ಲಿ ಒಂದು ರೀತಿ ನೋಡಿದೆ, ‘ಬೈಟು ಲವ್’ ಚಿತ್ರದಲ್ಲಿ ಬೇರೆ ರೀತಿ ನೋಡಿದೆ. ‘ಕೈವ’ ಸಿನಿಮಾ ನನಗೆ ತುಂಬ ಇಷ್ಟವಾಗಿತ್ತು. ಈಗ ವಾಮನ ನೋಡುತ್ತೇವೆ. ಆದರೆ, ಚಿತ್ರದಲ್ಲಿ ಎಲ್ಲಿಯೂ ರಿಪೀಟ್ ಇಲ್ಲ. ನಾಲ್ಕು ಸಬ್ಜೆಕ್ಟ್ ಕೂಡ ಬೇರೆ ಬೇರೆ ರೀತಿ ಇದೆ. ಈಗ ‘ವಾಮನ’ ತಾಯಿ ಸೆಂಟಿಮೆಂಟ್ ಸಿನಿಮಾ. ತಾಯಿಗಾಗಿ, ಪ್ರೀತಿಗಾಗಿ ಒಬ್ಬ ಹೇಗೆಲ್ಲ ಬದಲಾಗುತ್ತಾನೆ ಎಂಬುದು ಇದರಲ್ಲಿದೆ’ ಎಂದು ಹೇಳಿದ್ದಾರೆ.
ಈ ಚಿತ್ರದಲ್ಲಿ ನನಗೆ ಮುದ್ದು ರಾಕ್ಷಸಿ ಸಾಂಗ್ ಇಷ್ಟವಾಗಿದೆ. ಮನೆಯಲ್ಲಿ ನನ್ನ ಹೆಂಡತಿ ಕೋಪ ಮಾಡಿಕೊಂಡರೆ ನಾನು ಕೂಡ ರೇಗಿಸುತ್ತೇನೆ. ಅಲ್ಲದೇ, ನಾನು ಕನ್ನಡ ಚಿತ್ರರಂಗ ಬಿಟ್ಟು ಬೇರೆ ಭಾಷೆಯಲ್ಲಿ ಮಾಡುವುದಿಲ್ಲ. ಎಲ್ಲರೂ ಕನ್ನಡ ಜಿತ್ರರಂಗ ಪ್ರೋತ್ಸಾಹಿಸಿ, ಬೆಳೆಸಿ. ಈ ಚಿತ್ರರಂಗ ನಂಬಿಕೊಂಡು ಹಲವರು ಬದುಕುತ್ತಿರುತ್ತಾರೆ ಎಂದು ಮನವಿ ಮಾಡಿದ್ದಾರೆ.