ಬೆಂಗಳೂರು : ಕೊಟ್ಟೋನು ಕೊಡಂಗಿ ಇಸ್ಕೊಂಡೋನು ವೀರಭದ್ರ ಎಂಬ ಮಾತಿದೆ.ಅಂತೆಯೇ ಬೆಂಗಳೂರಲ್ಲಿ ಸ್ನೇಹಿತೆಯನ್ನ ನಂಬಿ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾಳೆ ಮಹಿಳೆ. ಇದೀಗ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಯನಗರ ನಿವಾಸಿ ಪ್ರಿಯಾಂಕ ಮತ್ತು ಲತಾ ಇಬ್ಬರು 20 ವರ್ಷಗಳಿಂದ ಆಪ್ತ ಸ್ನೇಹಿತೆಯರು. ಇದೇ ಸಲುಗೆಯಿಂದ ಲತಾ ಹಾಗೂ ಆಕೆಯ ತಂದೆಗೆ ಕಷ್ಟ ಇದೆ ಅಂಥ ಹಂತ ಹಂತವಾಗಿ ಸುಮಾರು 50 ಲಕ್ಷದವರೆಗೆ ತೆಗೆದುಕೊಂಡಿದ್ದಾರೆ. 2012ರಿಂದ 2014ರವರೆಗೆ ಲಕ್ಷಾಂತರ ರೂಪಾಯಿ ಕೊಟ್ಟಿದ್ದ ಪ್ರಿಯಾಂಕನಿಗೆ ಬಳಿಕ ಹಣ ನೀಡದೆ ಸತಾಯಿಸುತ್ತಿದ್ದರು.
ಸದ್ಯ ಪ್ರಿಯಾಂಕ, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವೇಳೆ 17 ಲಕ್ಷ ಹಣ ವಾಪಾಸ್ ನೀಡಿದ್ದಾರೆ ಉಳಿದ ಹಣ ನೀಡಿಲ್ಲ ಎಂದು ಪ್ರಿಯಾಂಕ ಆರೋಪಿಸಿದ್ದಾಳೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ : ಸರ್ಕಾರಿ ಕಚೇರಿ ಮುಂದೆಯೇ ಕಳ್ಳರ ಕೈಚಳಕ | ರಾಜರೋಷವಾಗಿ ಗಂಧದ ಮರಗಳನ್ನು ಹೊತ್ತೊಯ್ದ ಖದೀಮರು



















