ಚಿಕ್ಕಬಳ್ಳಾಪುರ: ಸಿನಿಮಾ ಮಾದರಿಯಲ್ಲಿ ಕಳ್ಳಿಯರು ಬಂಗಾರ ಕದ್ದಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಗಂಗಮ್ಮನಗುಡಿ ರಸ್ತೆಯ ನವೀನ್ ಜ್ಯೂವೆಲ್ಲರ್ಸ್ ನಲ್ಲಿ ನಡೆದಿದೆ.
ಚಿನ್ನದಂಗಡಿ ಮಾಲೀಕನಿಗೆ ಯಾಮಾರಿಸಿ ನಕಲಿ ಚಿನ್ನ ಕೊಟ್ಟು 5 ಲಕ್ಷ ರೂಪಾಯಿ ಮೌಲ್ಯದ ಅಸಲಿ ಚಿನ್ನ ದೋಚಿಕೊಂಡು ಕಳ್ಳಿಯರು ಪರಾರಿಯಾಗಿದ್ದಾರೆ.

ಗಣೇಶ್ ಎಂಬುವವರಿಗೆ ಸೇರಿದ ಅಂಗಡಿಯಲ್ಲಿ ತಮ್ಮಲ್ಲಿಯ ಬಂಗಾರದ ಹಳೇ ಚೈನ್ ಬದಲಿಗೆ ಹೊಸ ಶೈಲಿಯ ಚೈನ್ ಖರೀದಿ ಮಾಡುವ ನೆಪದಲ್ಲಿ ಚಿನ್ನದಂಗಡಿ ಮಾಲೀಕರಿಗೆ ತೋರಿಸುವಾಗ ಅಸಲಿ ಬಂಗಾರ ತೋರಿಸಿ ಬಳಿಕ ನಕಲಿ ಚಿನ್ನ ಕವರ್ ಗೆ ಹಾಕಿ ವಂಚನೆ ಮಾಡಿರುವ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















