ಹುಬ್ಬಳ್ಳಿ : ಹುಬ್ಬಳ್ಳಿ ಪೊಲೀಸ್ ಕ್ವಾಟರ್ಸ್ ನಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಎರಡು ಮನೆಗಳಿಂದ 2.5 ಲಕ್ಷ ಮೌಲ್ಯದ ಆಭರಣ ಹಾಗೂ ನಗದು ಕಳವು ಮಾಡಿರುವ ಘಟನೆ ಹುಬ್ಬಳ್ಳಿಯ ಚಾಣಕ್ಯಪುರಿ ಪೊಲೀಸ್ ಕ್ವಾಟರ್ಸ್ ಮತ್ತು ಸಿ.ಎ.ಆರ್ ಮೈದಾನ ಬಳಿಯ ಪೊಲೀಸರು ವಸತಿ ನಿಲಯದಲ್ಲಿ ನಡೆದಿದೆ.
ಇಬ್ಬರು ಪೊಲೀಸ್ ಸಿಬ್ಬಂದಿಗಳ ಮನೆಯಲ್ಲಿ ಬಂಗಾರ, ಬೆಳ್ಳಿ ಆಭರಣ ಹಾಗೂ ನಗದು ಕಳವು ಮಾಡಿದ್ದಾರೆ. ಸುಮಾರು 2.5 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಯಲ್ಲಪ್ಪ ದೊಡಮನಿ ಹಾಗೂ ಸುನೀಲಕುಮಾರ ಲಂಬಾಣಿ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಬಾಗಿಲಿನ ಬೀಗ ಮುರಿದು ಲಾಕರ್‌ನಲ್ಲಿದ್ದ 40 ಗ್ರಾಂ ಬಂಗಾರದ ಆಭರಣ, 100 ಗ್ರಾಂ ಬೆಳ್ಳಿಯ ಆಭರಣ ಹಾಗೂ 40 ಸಾವಿರ ನಗದು ಕಳವು ಮಾಡಿದ್ದಾರೆ.
ಮತ್ತೊಂದೆಡೆ ಸಿ.ಎ.ಆರ್ ಮೈದಾನ ಕ್ವಾರ್ಟರ್ಸ್ ನಲ್ಲಿ ಸುನೀಲ್ ಕುಮಾರ್ ಮನೆಯಿಂದ ಬಂಗಾರ ಹಾಗೂ ಬೆಳ್ಳಿಯ ಆಭರಣ ಕಳುವು ಮಾಡಿದ್ದಾರೆ. ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.



















