ದೇಶದಲ್ಲಿ ನಡೆದಿದ್ದ ಅತಿ ದೊಡ್ಡ ಬ್ಯಾಂಕ್ ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ.
ವಿಜಯಪುರ ಜಿಲ್ಲೆಯ ಪೊಲೀಸರು ದೊಡ್ಡ ಬೇಟೆಯಾಡಿದ್ದಾರೆ. ಬಂಧಿತ ಆರೋಪಿಗಳು, ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಬ್ಯಾಂಕ್ ನಲ್ಲಿ 58.97 ಕೆಜಿ ಬಂಗಾರ, 5 ಲಕ್ಷ 20 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೇ 25ರಂದು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಖತರ್ನಾಕ್ ಕಳ್ಳರ ಬಂಧನಕ್ಕಾಗಿ ವಿಜಯಪುರ ಜಿಲ್ಲೆಯ ಪೊಲೀಸರು ಎಂಟು ತಂಡಗಳನ್ನು ರಚಿಸಿ ಕಾರ್ಯಾಚರಣೆಗೆ ಮುಂದಾಗಿದ್ದರು. ಇದೀಗ ಮತ್ತೆ 12 ಮಂದಿ ಕಳ್ಳರನ್ನು ಬಂಧಿಸಿದ್ದಾರೆ.
ಬಂಧಿತದಿಂದ ಎರಡು ಕಾರು ಸೇರಿದಂತೆ 5 ಕಾರು ಹಾಗೂ ರೈಲ್ವೆ ಇಲಾಖೆಯ ಲಾರಿ, ಬಂಗಾರ ಕರಗಿಸುವ ಸಾಧನಗಳು, ಗ್ಯಾಸ್ ಸಿಲಿಂಡರ್, ಆಕ್ಸಿಜನ್ ಸಿಲಿಂಡರ್, ನಾಲ್ಕು ವಾಕಿಟಾಕಿಗಳು, ಪಿಸ್ತೂಲ್ ಮಾದರಿಯ ನಕಲಿ ಲೈಟರ್, 39 ಕೆಜಿ ಕರಗಿಸಿದ ಬಂಗಾರದ ಗಟ್ಟಿ ಹಾಗೂ ಆಭರಣಗಳು ಹಾಗೂ 1.16. ಕೋಟಿ ರೂ. ಹಣ ಸೇರಿ ಒಟ್ಟು 39.26 ಕೋಟಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಮೊದಲು ಬ್ಯಾಂಕ್ ಮ್ಯಾನೇಜರ್ ವಿಜಯಕುಮಾರ್ ಮಿರಿಯಾಲ್, ಆತನ ಸ್ನೇಹಿತ, ಚಂದ್ರಶೇಖರ್ ನರೇಲಾ ಹಾಗೂ ಸುನೀಲ್ ಮೋಕಾ ನನ್ನು ಬಂಧಿಸಿ 10 ಕೋಟಿ 75 ಲಕ್ಷ ಮೌಲ್ಯದ 10.5 ಕೋಟಿ ಬಂಗಾರ ವಶಕ್ಕೆ ಪಡೆಯಲಾಗಿತ್ತು.