ಬೆಳಗಾವಿ : ಬೈಲಹೊಂಗಲ ಕೇಂದ್ರ ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಕಳ್ಳತನ ಮಾಡಿಕೊಂಡಿದ್ದ ಖತರ್ನಾಕ್ ಕಳ್ಳಿಯನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಅನಿತಾ ಚೌಗುಲೆ(45) ಅರೆಸ್ಟ್ ಆಗಿರುವ ಆರೋಪಿ. ಸಾರ್ವಜನಿಕರು ಬಸ್ ಹತ್ತುವಾಗ ನೂಕುನುಗ್ಗಲು ಮಧ್ಯೆ ಆರೋಪಿ ಮಹಿಳೆಯು ಚಿನ್ನಾಭರಣ ಕದಿಯುತ್ತಿದ್ದಳೆಂದು ತಿಳಿದುಬಂದಿದೆ. ಈಕೆಯನ್ನು ಪಿಐ ಪ್ರಮೋದ ಯಲಿಗಾರ ನೇತೃತ್ವದ ತಂಡ ಬಂಧಿಸಿ, 90 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಪೊಲೀಸರು ಮಹಿಳೆಯಿಂದ ಸುಮಾರು 15–20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದು, ವಿಚಾರಣೆಗೆ ಹಾಜರು ಪಡೆಸಿದ್ದಾರೆ. ಜೊತೆಗೆ ಸ್ಥಳೀಯರಿಗೆ ಎಚ್ಚರಿಕೆಯಿಂದಿರಲೂ ತಿಳಿಸಿದ್ದಾರೆ.
ಇದನ್ನೂ ಓದಿ : ಆಟವಾಡುತ್ತಿದ್ದಾಗ ದುರಂತ.. ಎರಡೂವರೆ ವರ್ಷದ ಕಂದಮ್ಮ ಸಾವು!



















