ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಮತ್ತೆ ಕಳ್ಳರ ಗ್ಯಾಂಗ್ ಕಾಣಿಸಿಕೊಂಡಿದೆ. ಕಳೆದ ವಾರ ಮೆದೆಹಳ್ಳಿ ಗ್ರಾಮದಲ್ಲಿ ಕಳ್ಳರ ಗ್ಯಾಂಗ್ ಸ್ಥಳೀಯರನ್ನು ಬೆಚ್ಚಿ ಬೀಳಿಸಿತ್ತು. ಇದೀಗ ಮತ್ತೆ ವಿದ್ಯಾನಗರದ ಈರುಳ್ಳಿ ಮಲ್ಲಪ್ಪ ಲೇಔಟ್ ನಲ್ಲಿ ತಮ್ಮ ಕೈ ಚಳಕ ತೋರಿಸಿದೆ.
ಕಳ್ಳರ ಗ್ಯಾಂಗ್ ಯಾವುದೇ ಭಯಭೀತಿ ಇಲ್ಲ ಎಂಬಂತೆ ಓಡಾಡುತ್ತಿರುವುದು ಸಿಸಿಟಿವಿ ಕ್ಯಾಮಾರೆಗಳಲ್ಲಿ ಸೆರೆಯಾಗಿದೆ. ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಸುತ್ತಮುತ್ತ ಪ್ರದೇಶಗಳಲ್ಲಿ ಹೊಂಚು ಹಾಕುತ್ತಿರುವ ದೃಶ್ಯ ಸೆರೆಯಾಗಿದೆ.
ಮುಖಕ್ಕೆ ಮಾಸ್ಕ್, ಬ್ಯಾಗ್ ಹಾಕಿಕೊಂಡು ಮಾರಕಾಸ್ತ್ರ ಹಿಡಿದು ಈ ಖತರ್ನಾಕ್ ಕಳ್ಳರ ಗ್ಯಾಂಗ್ ಓಡಾಟ ನಡೆಸಿದ್ದು ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ. ಕಳ್ಳತನಕ್ಕೆ ಮನೆಗಳ ಸುತ್ತಮುತ್ತ ಸ್ಕೆಚ್ ಹಾಕುತ್ತಿರುವ ದೃಶ್ಯಗಳು ಸೆರೆಯಾಗಿವೆ.
ಮನೆಯವರು ಲೈಟ್ ಆನ್ ಮಾಡುತ್ತಿದಂತೆ ಕಳ್ಳರ ಗ್ಯಾಂಗ್ ಸ್ಥಳದಿಂದ ಕಾಲ್ಕಿತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಈ ಕಳ್ಳರ ಗ್ಯಾಂಗ್ ಈಗ ಕೋಟೆನಾಡಿನಲ್ಲಿ ಭಯ ಹುಟ್ಟಿಸಿದ್ದು, ಈ ಖತರ್ನಾಕ್ ಕಳ್ಳರ ಗ್ಯಾಂಗ್ ನ್ನು ಸೆರೆ ಹಿಡಿಯುವಂತೆ ಪೊಲೀಸರಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.