ಬೆಂಗಳೂರು: ಫುಡ್ ಡಿಲೆವರಿ ಬಾಯ್ ಎಂದು ಹೇಳಿ ಮಧ್ಯರಾತ್ರಿ ಮನೆಗ ನುಗ್ಗಿ ದರೋಡೆ ಮಾಡಿದ್ದ ಖತರ್ನಾಕ್ ಗ್ಯಾಂಗ್‌ಯೊಂದನ್ನು ಪತ್ತೆ ಹಚ್ಚಿದ ಹೆಚ್‌ಎಎಲ್ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕೇರಳ ಮೂಲದ ನಜಾಸ್, ಸರುಣ್, ಬೆಂಗಳೂರಿನ ವಿಷ್ಣು ಕೆ.ಟಿ, ದಿವಾಕರ್, ಮಧುಕುಮಾರ್, ಕಿರಣ್ ಬಂಧಿತ ಆರೋಪಿಗಳು
ಇತ್ತೀಚೆಗೆ ಪಿಜಿ ಯುವತಿಯೊಬ್ಬಳಿಗೆ ಟೀ ಅಂಗಡಿಯಲ್ಲಿ ನಜಾಸ್@ ಶಾಲು ಎಂಬಾತ ಪರಿಚಯವಾಗಿದ್ದ. ಬಳಿಕ ಯುವತಿ. ಆತನ ಬರ್ತ್ ಡೇ ಸೆಲೆಬ್ರೆಟ್ ಮಾಡಲು ಮನೆಗೆ ಕರೆದಿದ್ದಳು. ನಜಾಸ್ ತನ್ನ ಗೆಳೆಯನ ಜೊತೆ ಯುವತಿಯ ಪಿಜಿಗೆ ಹೋಗಿದ್ದ. ಈ ವೇಳೆ ಮಧ್ಯರಾತ್ರಿಯಲ್ಲಿ ಜೊಮೊಟೋ ಡಿಲಿವರಿ ಬಾಯ್ ಎಂದು ಬಾಗಿಲು ತಟ್ಟಿದ್ದಾರೆ. ಬಾಗಿಲು ತೆಗೆದಾಗ 4-5 ಮಂದಿ ಮನೆಗೆ ನುಗ್ಗಿ ಮನೆಯನ್ನು ಹುಡುಕಾಡಿ ಬೆದರಿಕೆ ಹಾಕಿದ್ದರು. ಬಳಿಕ ಇಬ್ಬರು ಯುವತಿಯರ ಬಳಿಯಿದ್ದ ಎರಡು ಮೊಬೈಲ್‌ನ್ನು ತಗೆದುಕೊಂಡು, 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು, ಹಣ ನೀಡದಿದ್ದರೆ ಮತ್ತೆ ಬರುವುದಾಗಿ ಬೆದರಿಕ ಕೂಡ ಹಾಕಿದ್ದರು.
ಈ ಘಟನೆ ಬಗ್ಗೆ ಯುವತಿ ಮರುದಿನ ಬೆಳಗ್ಗೆ ಹೆಚ್‌ಎ ಎಲ್ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಮಾಹಿತಿಯನ್ನು ಆಧರಿಸಿದ ಹೆಚ್‌ಎ ಎಲ್ ಪೊಲೀಸರು ರಾಬರಿ ಪ್ರಕರಣ ದಾಖಲಿಸಿಕೊಂಡು. ತನಿಖೆ ಕೈಗೊಂಡ ವೇಳೆ ಯುವತಿಯ ಗೆಳೆಯ ನಜಾಸ್‌ನ ರಾಬರಿ ಪ್ಲಾನ್ ಬಯಲಾಗಿದೆ.
ಬಳಿಕ ಹೆಚ್‌ಎಎಲ್ ಪೊಲೀಸರು ನಜಾಸ್ ಜೊತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರಲ್ಲಿ ಸರುಣ್ ಈ ಹಿಂದೆ ಹನಿ ಟ್ರ್ಯಾಪ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ.ಇದೇ ಅನುಭವ ಇಟ್ಟಕೊಂಡು ರಾಬರಿ ಮುಂದಾಗಿ ಮತ್ತೆ ಲಾಕ್ ಆಗಿದ್ದಾನೆ. ಸದ್ಯ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿ ಎಂದು ವಂಚನೆ | ಆರೋಪಿ ಬಂಧನ



















