ಬೆಂಗಳೂರು: ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಪ್ಲೈಓವರ್ ಈಗ ಸವಾರರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ.
ಈ ಡೇಂಜರ್ ಪ್ಲೈ ಓವರ್ ನಲ್ಲಿ ಕೈಯಲ್ಲಿ ಜೀವ ಹಿಡಿದು ವಾಹನ ಸವಾರರು ಹೋಗಬೇಕಾದ ಪರಿಸ್ಥಿತಿ ಬಂದೋದಗಿದೆ. ಈ ಫ್ಲೈ ಓವರ್ ನಲ್ಲಿ ಸ್ವಲ್ಪ ಯಾಮಾರಿದರೂ ದ್ವಿಚಕ್ರ ವಾಹನ ಸವಾರರು ಸ್ಕೀಡ್ ಆಗುವುದು ಗ್ಯಾರಂಟಿ.
ಬರೋಬ್ಬರಿ 449 ಕೋಟಿ ರೂ. ಅನುದಾನದಲ್ಲಿ ರಾಗಿಗುಡ್ಡ- ಸಿಲ್ಕ್ ಬೋರ್ಡ್ ಜಂಕ್ಷನ್(Silk Board Junction) ನಿರ್ಮಿಸಲಾಗಿತ್ತು. ಈಗ ಜಂಕ್ಷನ್ ನಲ್ಲಿ ತಗ್ಗು-ಗುಂಡಿಗಳು ಬಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಜಂಕ್ಷನ್ ಗೆ ಕಳೆದ ಆರು ತಿಂಗಳ ಹಿಂದಷ್ಟೇ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ಕೊಟ್ಟಿದ್ದರು. ಹೀಗಾಗಿ ಜನರು ಈಗ ಸರ್ಕಾರಕ್ಕೆ ಹಾಗೂ ಡಿಸಿಎಂ ಶಿವಕುಮಾರ್ ಗೆ ಪ್ರಶ್ನೆ ಮಾಡುತ್ತಿದ್ದಾರೆ. ಇದೇನಾ ನಿಮ್ಮ ಗುಣಮಟ್ಟದ ಕಾಮಗಾರಿ ಎಂದು ಪ್ರಶ್ನಿಸುದ್ದಿದ್ದಾರೆ. ಫ್ಲೈ ಓವರ್ ನಲ್ಲಿ ಹೆಚ್ಚಿನ ವೇಗದಲ್ಲಿ ವಾಹನಗಳು ಸಂಚರಿಸುತ್ತಿರುತ್ತವೆ. ಹೀಗಾಗಿ ಅಪಘಾತ ಹೆಚ್ಚಾಗುವ ಭಯ ಕಾಡುತ್ತಿದೆ.