ಡಿ.ಕೆ. ಸುರೇಶ್ ನಕಲಿ ತಂಗಿ ಐಶ್ವರ್ಯಾ ಗೌಡಗೆ ವಂಚನೆAishwarya Gowda Gold Fraud Caseಯ ಮೂರನೇ ಪ್ರಕರಣದಲ್ಲೂ ಜಾಮೀನು ಸಿಕ್ಕಿದೆ.
ಈ ಮೂಲಕ ಆರೋಪಿ ಐಶ್ವರ್ಯ ಗೌಡ @ ನವ್ಯಶ್ರಿಗೆ 3ನೇ ಪ್ರಕರಣದಲ್ಲೂ ರಿಲೀಫ್ ಸಿಕ್ಕಿದೆ. ಐಶ್ವರ್ಯಾ ವಿರುದ್ಧ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂದು ಹೈಕೋರ್ಟ್, ರಾಜ್ಯ ಪ್ರಾಸಿಕ್ಯೂಷನ್ ಗೆ ಆದೇಶ ನೀಡಿದೆ. ಈ ಕುರಿತು ನ್ಯಾಯವಾದಿ ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.
ಮಹಿಳಾ ವೈದ್ಯೆಯೊಬ್ಬರಿಗೆ ವಂಚಿಸಿದ್ದಾರೆಂಬ ಕಾರಣಕ್ಕೆ ಆರ್ ಆರ್ ನಗರ ಠಾಣೆಯಲ್ಲಿ ವಂಚನೆಯ ದೂರು ದಾಖಲಾಗಿತ್ತು. ಡಾ. ಮಂಜುಳಾ ಪಾಟೀಲ್ ಎಂಬುವವರು ದಾಖಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಐಶ್ವರ್ಯಾ ಗೌಡ ವಿರುದ್ಧ BNS 316(2), 318(4), 352,351(2), 61(2),3(5)ರಡಿ ಪ್ರಕರಣ ದಾಖಲಾಗಿದ್ದವು.
ಹೀಗಾಗಿ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಐಶ್ವರ್ಯಾ ಗೌಡ ಹಾಗೂ ಪತಿ ಕೆ.ಎನ್.ಹರೀಶ್ ಅರ್ಜಿ ಸಲ್ಲಿಸಿದ್ದರು. ಐಶ್ವರ್ಯಗೌಡ ಪರ ಹಿರಿಯ ವಕೀಲ ಸಂದೇಶ್ ಜೆ.ಚೌಟ ವಾದಿಸಿದ್ದರು. ಈ ಪ್ರಕರಣ 4ನೇ ಎಸಿಎಂಎನಲ್ಲಿ ವಿಚಾರಣೆ ಹಂತದಲ್ಲಿದೆ. ಮೂರನೇ ಪ್ರಕರಣದಲ್ಲೂ ಐಶ್ವರ್ಯಗೌಡ ನಿರಾಳರಾದಂತಾಗಿದೆ.