ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧದಂತೆ ದರ್ಶನ್ ಸೇರಿದಂತೆ ಇತರ ಆರೋಪಿಗಳನ್ನು 57ನೇ ಸೆಷನ್ ಕೋರ್ಟ್ ಗೆ ಇಂದು ಹಾಜರುಪಡಿಸಲಾಗಿತ್ತು. ದೋಷಾರೋಪ ನಿಗದಿ ವೇಳೆ ದರ್ಶನ್ ಸೇರಿ ಇತರೆ ಆರೋಪಿಗಳು ತಪ್ಪೊಪ್ಪಿಕೊಳ್ಳದ ಕಾರಣ ವಿಚಾರಣೆಯನ್ನು ನ. 10ಕ್ಕೆ ಮುಂದೂಡಲಾಗಿದೆ.
ಕೊಲೆ ಆರೋಪದಲ್ಲಿ ಜೈಲು ಸೇರಿರುವ ದರ್ಶನ್ ಸೇರಿದಂತೆ ಇತರೆ ಆರೋಪಿಗಳನ್ನು ಇಂದು ನ. 3ರಂದು ಬೆಂಗಳೂರು 64ನೇ ಸಿಸಿಎಚ್ ಕೋರ್ಟ್‌ಗೆ ಹಾಜರಾಗಿದರು. ಇದರಂತೆ ಭಾರಿ ಬಿಗಿ ಭದ್ರತೆಯೊಂದಿಗೆ ಎ2 ಆರೋಪಿ ನಟ ದರ್ಶನ್, ಎ1 ಆರೋಪಿ ಪವಿತ್ರ ಗೌಡ ಸೇರಿದಂತೆ 6 ಆರೋಪಿಗಳು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.
ದೋಷಾರೋಪಣೆ ನಿಗದಿ ವೇಳೆ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳ ತಪ್ಪೊಪ್ಪಿಕೊಳ್ಳದ ಕಾರಣ ವಿಚಾರಣೆಯನ್ನು ಕೋರ್ಟ್ ನ.10ಕ್ಕೆ ಮುಂದೂಡಿದೆ.
ಬಹಳ ದಿನಗಳ ಬಳಿಕ ಆಗಮಿಸಿದ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಕೋರ್ಟ್ ಬಳಿ ಗುಂಪುಗೂಡಿದರು. ಅವರನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಕೋರ್ಟ್‌ಗೆ ಕರೆತಂದರು. ಪವಿತ್ರಾ ಗೌಡ ಕಣ್ಣೀರಿಡುತ್ತಲೇ ಕೋರ್ಟ್ ಹಾಲ್‌ಗೆ ಕಾಲಿಟ್ಟಿದ್ದು ಕಂಡು ಬಂದಿದೆ.
ಜಡ್ಜ್ ಸಮ್ಮುಖದಲ್ಲಿ ಆರೋಪಿಗಳನ್ನು ಪೊಲೀಸರು ನಿಲ್ಲಿಸಿದರು. ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಪ್ರಮುಖ ಆರೋಪಿಗಳಿಗೆ ಜಡ್ಜ್ ಒಂದಷ್ಟು ಪ್ರಶ್ನೆಗಳನ್ನು ಕೇಳಿದರು. ಕೊಲೆ, ಅಪಹರಣ, ಸಾಕ್ಷಿನಾಶ, ಅಕ್ರಮ ಕೂಟ, ಕ್ರಿಮಿನಲ್ ಒಳಸಂಚು ಸೇರಿದಂತೆ ಹಲವು ಆರೋಪಗಳನ್ನು ಎಲ್ಲ ಆರೋಪಿಗಳ ಎದುರು ಓದಿ ಹೇಳಲಾಯಿತು. ಆರೋಪ ಒಪ್ಪಿಕೊಂಡರೆ ಶಿಕ್ಷೆ ಪ್ರಕಟ ಆಗುತ್ತಿತ್ತು. ಆರೋಪಗಳನ್ನು ಒಪ್ಪಿಕೊಳ್ಳದ ಕಾರಣ ಸಾಕ್ಷ್ಯಗಳ ವಿಚಾರಣೆಗೆ ದಿನಾಂಕ ನಿಗದಿಯಾಗಿದೆ.



















