ಬೆಂಗಳೂರು: ನಟ ದರ್ಶನ್ ಬರೋಬ್ಬರಿ 9 ತಿಂಗಳ ನಂತರ ವಿಮಾನವೇರಿದ್ದಾರೆ.
ಶೂಟಿಂಗ್ ವಿಷಯವಾಗಿ (Darshan) ಅವರು ವಿಮಾನ ಹತ್ತಿದ್ದಾರೆ. ಸೋಮವಾರ ಬೆಂಗಳೂರಿನಿಂದ (Bengaluru) ದರ್ಶನ್ ವಿಮಾನದ ಮೂಲಕ ರಾಜಸ್ಥಾನಕ್ಕೆ (Rajasthan) ಹೋಗಿದ್ದಾರೆ. ಜೈಪುರದಲ್ಲಿ ಇಂದಿನಿಂದ ಡೆವಿಲ್ (Devil) ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಹೀಗಾಗಿ ಡಿ ಬಾಸ್ ವಿಮಾನ ಹತ್ತಿದ್ದಾರೆ.
ನಂತರ ಅವರು ಮಾರ್ಚ್ 27ರಂದು ಬೆಂಗಳೂರಿಗೆ ಆಗಮಿಸುತ್ತಾರೆ. ಅಂದು ಧ್ವನೀರ್ (Dhanveer) ನಟನೆಯ ವಾಮನ ಸಿನಿಮಾ ಟ್ರೈಲರ್ ನ್ನು ಬಿಡುಗಡೆ ಮಾಡಲಿದ್ದಾರೆ. ಟ್ರೈಲರ್ ಬಿಡುಗಡೆ ಮಾಡಿದ ನಂತರ ಮತ್ತೆ ದರ್ಶನ್ ಜೈಪುರಕ್ಕೆ ತೆರಳಿ ಶೂಟಿಂಗ್ ನಲ್ಲಿ ಭಾಗಿಯಗಾಲಿದ್ದಾರೆ ಎಂದು ತಿಳಿದು ಬಂದಿದೆ.
ಏಪ್ರಿಲ್ 3ರವರೆಗೂ ದರ್ಶನ್ ಡೆವಿಲ್ ಚಿತ್ರದ ಶೂಟಿಂಗ್ ನಲ್ಲೇ ಭಾಗಿಯಾಗಲಿದ್ದಾರೆ. ಇತ್ತೀಚೆಗಷ್ಟೇ ಕೋರ್ಟ್ ನಟ ದರ್ಶನ್ ಗೆ ಶೂಟಿಂಗ್‌ಗೆ ತೆರಳಲು ಅನುಮತಿ ನೀಡಿತ್ತು. ಅನುಮತಿ ಸಿಕ್ಕ ನಂತರ ಇದೇ ಮೊದಲ ಬಾರಿಗೆ ಅವರು ವಿಮಾನ ಹತ್ತಿದ್ದಾರೆ