ಬೆಂಗಳೂರು: ನಗರದಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಪುಲಿಕೇಶಿ ನಗರದ (Pulikeshi Nagar) ಡೆವೀಸ್ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಇಲ್ಲಿನ ವಿಶ್ರಾಂ ಅಪಾರ್ಟ್ ಮೆಂಟ್ ನಲ್ಲಿ (Apartment) ಸಿಲಿಂಡರ್ ಸ್ಫೋಟಗೊಂಡ (Cylinder Blast) ಪರಿಣಾಮ ಮನೆಯಲ್ಲಿದ್ದ ಮೂವರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ಮನೆ ಸಂಪೂರ್ಣ ಜಖಂಗೊಂಡಿದೆ.
ಬ್ಲಾಸ್ಟ್ ಆದ ಗ್ಯಾಸ್‌ನ ಪೀಸ್ ಕೂಡ ಪತ್ತೆಯಾಗದಷ್ಟು ದೊಡ್ಡ ಮಟ್ಟದಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಅನಾಹುತ ನಡೆಯದಂತೆ ನೋಡಿದ್ದಾರೆ.