ತಿರುವನಂತಪುರಂ: ಕೇರಳಕ್ಕೆ ಡಾನಾ ಚಂಡಮಾರುತದ ಕಾಟ ಶುರುವಾಗಿದ್ದು ಭಾರೀ ಮಳೆಯ ಮುನ್ಸೂಚನೆ ಎದುರಾಗಿದೆ.
ಅಧಿಕೃತ ಹವಾಮಾನ ಇಲಾಖೆಯು ರಾಜ್ಯದ ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದೆ. ಈಗಾಗಲೇ ಒಡಿಶಾದಾದ್ಯಂತ ಭೂಕುಸಿತಕ್ಕೆ ಕಾರಣವಾಗಿರುವ ಡಾನಾ ಚಂಡಮಾರುತದ ಪ್ರಭಾವದಿಂದಾಗಿ ಅಕ್ಟೋಬರ್ 27ರ ವರೆಗೆ ವ್ಯಾಪಕ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಡಾನಾ ಚಂಡಮಾರುತದ ಪರಿಣಾಮವು ಕನಿಷ್ಠ ಮುಂದಿನ 1 ವಾರದವರೆಗೆ ಮುಂದುವರಿಯುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಭಾರಿ ಅಲೆಗಳು ಮತ್ತು ಪ್ರಕ್ಷುಬ್ಧ ಸಮುದ್ರ ಇರಲಿದೆ. ಹೀಗಾಗಿ ಮೀನುಗಾರರೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಪ್ರವಾಸಿಗರು ಕೂಡ ಕೇರಳದತ್ತ ಸ್ವಲ್ಪ ದಿನ ಮುಖ ಮಾಡದೆ ಇರುವುದು ಉತ್ತಮ.
ಕೊಲ್ಲಂ ಮತ್ತು ತಿರುವನಂತಪುರಂನ ಗ್ರಾಮೀಣ ಮತ್ತು ಕರಾವಳಿ ಪ್ರದೇಶಗಳಲ್ಲಿ ಅಧಿಕ ಮಳೆ ಸುರಿಯುತ್ತಿದೆ. ಕರಮಾನ ನದಿಯ ಎರಡೂ ಬದಿಯಲ್ಲಿ ವಾಸಿಸುವ ಜನರು ಜಾಗರೂಕರಾಗಿರಲು ತಿಳಿಸಲಾಗಿದೆ. ಕರ್ನಾಟಕಕ್ಕೂ ಇದರ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.