ಬೆಂಗಳೂರು: ಪೊಲೀಸರಿಗೆ ಸೈಬರ್ ವಂಚಕರು ತಲೆನೋವಾಗಿ ಪರಿಣಮಿಸುತ್ತಿದ್ದಾರೆ. ಖದೀಮರು ಹೊಸ ಹೊಸ ಹಾದಿ ಹಿಡಿದು ವಂಚಿಸುವ ಕಾರ್ಯ ಮಾಡುತ್ತಿದ್ದಾರೆ.
ಎಷ್ಟೇ ಜಾಗೃತಿ ಮೂಡಿಸಿದ್ರು ಮೋಸದ ಜಾಲಕ್ಕೆ ಮಾತ್ರ ಜನ ಬೀಳುತ್ತಿದ್ದಾರೆ. ಹೀಗಾಗಿ ಕಳೆದ 20 ದಿನಗಳಲ್ಲಿ ಬರೋಬ್ಬರಿ 950ಕ್ಕೂ ಅಧಿಕ ಸೈಬರ್ ವಂಚನೆಯ ಪ್ರಕರಣಗಳು ದಾಖಲಾಗಿವೆ.
ಡಿಜಿಟಲ್ ಅರೆಸ್ಟ್, ಗಿಫ್ಟ್ ವೋಚರ್, ಎಪಿಕೆ ಫೈಲ್ ಸೇರಿದಂತೆ ನಾನಾ ಅವತಾರದಲ್ಲಿ ಜನರನ್ನು ವಂಚಿಸಲಾಗುತ್ತಿದೆ. ಹೀಗಾಗಿ ಸೈಬರ್ ವಂಚನೆಯ ಬಲೆಗೆ ಬೀಳುತ್ತಿರುವ ಜನರು ಕೋಟಿ ಕೋಟಿ ಹಣ ಕಳೆದುಕೊಳ್ಳುತ್ತಿದ್ದಾರೆ.
ಬೆಂಗಳೂರಿನಲ್ಲಿ ಸೈಬರ್ ವಂಚನೆ ಪ್ರಕರಣ ಭೇದಿಸುವುದಕ್ಕಾಗಿ 8 ಕಂಟ್ರೊಲ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ ಪ್ರತಿ ಪೊಲೀಸ್ ಠಾಣೆಯಲ್ಲಿಯೂ ಸೈಬರ್ ವಂಚನೆ ಕೇಸ್ ದಾಖಲಿಸಿಕೊಳ್ಳಲಾಗುತ್ತಿದೆ. ಕಾಲರ್ ಟ್ಯೂನ್, ಸೋಷಿಯಲ್ ಮೀಡಿಯಾ ಮೂಲಕ ಪೊಲೀಸರಿಂದ ಜಾಗೃತಿ ಮೂಡಿಸಲಾಗುತ್ತಿದೆ. ಎಷ್ಟೇ ಜಾಗೃತಿ ಮೂಡಿಸಿದರು ಜನರು ಮಾತ್ರ ಹಣ ಕಳೆದುಕೊಳ್ಳುತ್ತಿದ್ದಾರೆ. ಸೈಬರ್ ಖದೀಮರು ಹಿಡಿದ ದಾರಿ ಕಂಡು ಪೊಲೀಸರೇ ಶಾಕ್ ಆಗುತ್ತಿದ್ದಾರೆ.
ವಂಚನೆ ಹಾದಿ 1: ಡಿಜಿಟಲ್ ಅರೆಸ್ಟ್
ಪೊಲೀಸರ ವೇಷದಲ್ಲಿ ಕಾಲ್ ಮಾಡುವ ಸೈಬರ್ ಖದೀಮರು, ನಿಮ್ಮ ಹೆಸರಿನಲ್ಲಿ ಬಂದ ಪಾರ್ಸೆಲ್ ನಲ್ಲಿ ಡ್ರಗ್ಸ್ ಇದೆ. ನಿಮ್ಮನ್ನು ಬಂಧಿಸುತ್ತೇವೆ ಎಂದು ಬ್ಲಾಕ್ ಮೇಲ್ ಮಾಡುತ್ತಾರೆ. ಇತ್ತಿಚಿಗೆ ಇದೇ ರೀತಿ ಈಶಾನ್ಯ ವಿಭಾಗದಲ್ಲಿ ಟೆಕ್ಕಿಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿ 11 ಕೋಟಿ ರೂ. ವಂಚಿಸಲಾಗಿದೆ. ಇ.ಡಿ ಅಧಿಕಾರಿಗಳು ಅಂತ ಬೆದರಿಸಿ 11 ಕೋಟಿ ರೂ. ಹಣವನ್ನು ಖದೀಮರು ವಿವಿಧ ಖಾತೆಗಳಿಗೆ ಹಾಕಿಸಿಕೊಂಡಿದ್ದಾರೆ.
ವಂಚನೆ ಹಾದಿ 2: ಗಿಫ್ಟ್ ವೋಚರ್
ಪೋಸ್ಟ್ ಮೂಲಕ ಗಿಫ್ಟ್ ವಿನ್ನಿಂಗ್ ವೋಚರ್ ಕಳುಹಿಸುವ ಖದೀಮರು, ಗಿಫ್ಟ್ ಕಾರ್ಡ್ ಕಳಿಸಿ ಸ್ಕ್ರಾಚ್ ಮಾಡಿದ್ರೆ ನಿಮಗೆ 51 ಲಕ್ಷ ಕ್ಯಾಶ್ ರಿವಾರ್ಡ್ ಸಿಗುತ್ತೆ ಅಂತಾ ನಂಬಿಸಿ ವಂಚಿಸಿದ್ದಾರೆ. ಒಂದು ವೇಳೆ ಇದನ್ನು ನಂಬಿ ವಿನ್ನಿಂಗ್ ವೋಚರ್ ಕೆಳಗಡೆ ಇರುವ ನಂಬರ್ ಗೆ ಕಾಲ್ ಮಾಡಿದರೆ ಹಣ ಹೋಗುತ್ತದೆ. ಇದೇ ರೀತಿ ಬೇರೆ ಬೇರೆ ರೀತಿ ಗಿಫ್ಟ್ ವೋಚರ್ ಕಳುಹಿಸಿ ವಂಚನೆ ಮಾಡುತ್ತಿದ್ದಾರೆ.
ವಂಚನೆ ಹಾದಿ 3: ಮೊಬೈಲ್ ಗಿಫ್ಟ್ ಕಳುಹಿಸಿ ಮೋಸ
ಕೊರಿಯರ್ ಮೂಲಕ ಹೊಸ ಪೋನ್ ಕಳಿಸಿ ಕೋಟಿ ಕೋಟಿ ವಂಚನೆ ಮಾಡಲು ಖದೀಮರು ಹೊಂಚು ಹಾಕುತ್ತಿದ್ದಾರೆ. ಹೀಗೆ ಮೊಬೈಲ್ ಕಳುಹಿಸಿ ಬೆಂಗಳೂರಿನ ಟೆಕ್ಕಿಯೊಬ್ಬರ ಬಳಿ 2.80 ಕೋಟಿ ರೂ. ದೋಚಿದ್ದಾರೆ. ಟೆಕ್ಕಿಯೊಬ್ಬರ ವಿಳಾಸಕ್ಕೆ ಮೊಬೈಲ್ ಕಳುಹಿಸಿ, ಖುಷಿಯಲ್ಲಿ ಮೊಬೈಲ್ ಪಡೆದ ಟೆಕ್ಕಿ ಅದಕ್ಕೆ ತನ್ನ ಸಿಮ್ ಕಾರ್ಡ್ ಬದಲಾವಣೆ ಮಾಡಿದ್ದಾರೆ. ಹೀಗೆ ಮಾಡಿ ಹಣ ಎಗರಿಸುತ್ತಿದ್ದಾರೆ. ಮೊಬೈಲ್ ನಲ್ಲಿ ವಂಚಕರು ಮೊದಲೇ ಕೆಲವು ಆ್ಯಪ್ ಇನ್ಸ್ಟಾಲ್ ಮಾಡಿ, ವಂಚಿಸಿದ್ದಾರೆ. ಆದರಂತೆ ಟೆಕ್ಕಿ ಮೊಬೈಲ್ ಗೆ ಸಿಮ್ ಹಾಕುತ್ತಿದ್ದಂತೆ ಖದೀಮರು ಹಣ ಎಗರಿಸುತ್ತಿದ್ದಾರೆ. ಹೀಗೆ ಮಾಡಿ ಎಫ್ ಡಿಯಲ್ಲಿ ಇಟ್ಟಿದ್ದ 2 ಕೋಟಿ 80 ಲಕ್ಷ ಹಣವನ್ನು ಖದೀಮರು ಎಗರಿಸಿದ್ದಾರೆ. ವೈಟ್ ಫೀಲ್ಡ್ ಸೆನ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ವಂಚನೆ ಹಾದಿ 3: ಎಪಿಕೆ ಪೈಲ್ ಕಳುಹಿಸಿ ಅಕೌಂಟ್ ಹ್ಯಾಕ್
ವಂಚನೆ ಹಾದಿ 4: ವರ್ಕ್ ಫ್ರಂ ಹೋಂ ಅಂತ ಮೋಸ
ವಂಚನೆ ಹಾದಿ 5: ರೇಟಿಂಗ್ ನೀಡುವಂತೆ ಆಮಿಶವೊಡ್ಡಿ ವಂಚನೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹೀಗಾಗಿ ಜನರು ಸಾಕಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ಮನವಿ ಮಾಡುತ್ತಿದ್ದಾರೆ.