ರಾಜ್ಯದಲ್ಲಿನ ಮಾರುಕಟ್ಟೆಗಳಲ್ಲಿ ವೀಳ್ಯದೆಲೆ ಬೆಲೆ ಗಗನಕ್ಕೆ ಏರಿಕೆಯಾಗುತ್ತಿದ್ದು, ಗ್ರಾಹಕರ ಜೇಬು ಖಾಲಿಯಾಗುವಂತಾಗುತ್ತಿದೆ. ಅದರಲ್ಲೂ ವೀಳ್ಯದೆಲೆ ಹೆಚ್ಚು ಬಳಕೆ ಮಾಡುತ್ತಿರುವ ಉತ್ತರ ಕರ್ನಾಟಕ ಸೇರಿದಂತೆ ಹಲವೆಡೆಯ ರೈತರಂತೂ ಕಂಗಾಲಾಗಿ ಹೋಗಿದ್ದಾರೆ.
ಒಂದು ಕಟ್ಟು ವೀಳ್ಯದೆಲೆ ಬೆಲೆ ಈಗ ಬರೋಬ್ಬರಿ 200 ರೂ. ನಿಂದ 250 ರೂ.ಗಡಿ ದಾಟಿದೆ. ದರ ಇಷ್ಟೊಂದು ದುಬಾರಿಯಾದರೂ ಮಾರುಕಟ್ಟೆಯಲ್ಲಿ ಗುಣಮಟ್ಟದ ವೀಳ್ಯದೆಲೆ ಸಿಗುತ್ತಿಲ್ಲ ಎಂದು ಕೂಡ ಗ್ರಾಹಕರು ಆರೋಪಿಸುತ್ತಿದ್ದಾರೆ. ದಟ್ಟ ಮಂಜು ಸೇರಿದಂತೆ ಪ್ರಕೃತಿಯ ವೈಪರೀತ್ಯದಿಂದಾಗಿ ವೀಳ್ಯದೆಲೆ ಇಳುವರಿ ಸರಿಯಾಗಿ ಬರುತ್ತಿಲ್ಲ. ಹೀಗಾಗಿ ಈ ತಿಂಗಳ ಅಂತ್ಯದವರೆಗೂ ದರ ಇದೇ ರೀತಿ ಉಳಿಯಬಹುದು ಎನ್ನಲಾಗುತ್ತಿದೆ.
ಒಂದೇ ವಾರದಲ್ಲಿ ಒಂದು ಕಟ್ಟಿನ ಬೆಲೆ 50 ರೂ. ನಿಂದ 60 ರೂ.ವರೆಗೆ ಹೆಚ್ಚಳವಾಗಿದೆ. ಒಂದು ಕಟ್ಟಿಗೆ ಒಟ್ಟು 100 ವೀಳ್ಯದೆಲೆ ಇರುತ್ತದೆ. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ವೀಳ್ಯದೆಲೆ ಸರಾಸರಿ 2 ರೂ.ಗೆ ಮಾರಾಟವಾಗುತ್ತಿದೆ. ಇದು ಸಾಕಷ್ಟು ಹೊರೆಯಾಗುವಂತೆ ಮಾಡಿದೆ. ಚಳಿಗಾಲದಲ್ಲಿ ವೀಳ್ಯದೆಲೆ ಬಳ್ಳಿಯಲ್ಲಿ(ಅಂಬು) ಹೊಸ ಚಿಗುರು ಬರುವುದಿಲ್ಲ. ಹೀಗಾಗಿ ದರ ಏರಿಕೆಯಾಗಿದೆ.