ಬೆಂಗಳೂರು : ಏರ್ಪೋರ್ಟ್ ರಾಮೇಶ್ವರಂ ಕೆಫೆಯಲ್ಲಿ ಖರೀದಿಸಿದ್ದ ಉಪಹಾರದಲ್ಲಿ ಜಿರಳೆ ಕಾಣಿಸಿಕೊಂಡಿದೆ.
ಇಂದು ಬೆಳ್ಳಂಬೆಳಗ್ಗೆ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಲೋಕನಾಥ್ ಎನ್ನುವವರು ಉಪಹಾರಕ್ಕೆಂದು ಪೊಂಗಲ್ ಖರೀದಿಸಿದ್ದು, ಅದರಲ್ಲಿ ಜಿರಳೆ ಕಾಣಿಸಿಕೊಂಡಿದೆ. ತಿಂಡಿ ತಿನ್ನುತ್ತಿರುವಾಗಲೇ ಜಿರಳೆ ನೋಡಿ ಲೋಕನಾಥ್ ಬೆಚ್ಚಿಬಿದ್ದಿದ್ದಾರೆ.
ಈ ವೇಳೆ ಹೋಟೆಲ್ ಸಿಬ್ಬಂದಿಗೆ ಕಟುವಾಗಿ ಪ್ರಶ್ನಿಸಿದ ಲೋಕನಾಥ್, ಹೋಟೇಲ್ ಮಾಲೀಕರ ಕ್ಷಮೆಯಾಚನೆಗೆ ಒತ್ತಾಯಿಸಿದ್ದಾನೆ. ಹೋಟೇಲ್ ಸಿಬ್ಬಂದಿ ತಪ್ಪಾಯಿತೆಂದು ಕ್ಷಮೆಯಾಚಿಸಿರುವುದಾಗಿ ತಿಳಿದು ಬಂದಿದೆ.



















