ಬೆಳಗಾವಿ : ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಬೆಳಗಾವಿ ತಾಲೂಕಿನ ಚಚಡಿ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.
ಬೆಳಗಾವಿ ಪ್ರಾದೇಶಿಕ ಕಚೇರಿ ಮುಂಭಾಗದಲ್ಲಿ ಮಹಿಳೆಯರು ಪ್ರೊಟೆಸ್ಟ್ ಮಾಡಿದ್ದು, ಗ್ರಾಮದಲ್ಲಿರುವ ಬಹುತೇಕ ಅಂಗಡಿ ಮಾಲೀಕರು ಅಕ್ರಮ ಸಾರಾಯಿ ಮಾರಾಟ ಮಾಡ್ತಿದ್ದಾರೆ. ಇದರ ಪರಿಣಾಮ ಗ್ರಾಮದಲ್ಲಿರೋ ಕುಟುಂಬಗಳು ಬೀದಿಗೆ ಬರ್ತಿವೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದರಿಂದ ಕುಟುಂಬಗಳ ಶಾಂತಿ, ನೆಮ್ಮದಿ ಹಾಳಾಗುತ್ತಿದ್ದು, ಗ್ರಾಮದಲ್ಲಿ ಆರೋಗ್ಯಕರ ವಾತಾವರಣ ಸಂಪೂರ್ಣ ಹದಗೆಟ್ಟಿದೆ. ಕುಡಿದುಬಂದು ನಮ್ಮ ಮಕ್ಕಳೇ ನಮ್ಮನ್ನು ಹೊಡೆಯುತ್ತಿದ್ದಾರೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅಕ್ರಮ ಸಾರಾಯಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ತಕ್ಷಣವೇ ಎಂಎಸ್ಐಎಲ್ ಮದ್ಯದಂಗಡಿ ಹಾಗೂ ಅಕ್ರಮ ಸಾರಾಯಿ ಬಂದ್ ಮಾಡುವಂತೆ ಪ್ರಾದೇಶಿಕ ಆಯುಕ್ತರಿಗೆ, ಬೆಳಗಾವಿ ಡಿಸಿಗೆ, ಹಾಗೂ ಅಬಕಾರಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ ; ಬಿ.ಇ ಮುಗಿಸಿದವರಿಗೆ ಗುಡ್ ನ್ಯೂಸ್.. ಕೇಂದ್ರ ಸರ್ಕಾರದ BEML ಸಂಸ್ಥೆಯಲ್ಲಿ 78 ಹುದ್ದೆಗಳ ನೇಮಕಾತಿ!



















