ಬೆಳಗಾವಿ: ಶಾಸಕ ಸಿ.ಟಿ. ರವಿ ಬಂಧಿಸಿದ ವೇಳೆ ಠಾಣೆಯೊಳಗೆ ಉಂಟಾದ ಗೊಂದಲಕ್ಕೆ ಸಂಬಂಧಿಸಿದಂತೆ ಖಾನಾಪುರ ಸಿಪಿಐ ಮಂಜುನಾಥ್ ನಾಯಕ್ ರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಆದರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಖಾನಾಪುರದಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ.
ಈ ವಿಷಯವಾಗಿ ಮಾತನಾಡಿರುವ ಸಿಪಿಐ ಮಂಜುನಾಥ್, ಇಲಾಖೆಯಿಂದ ನ್ಯಾಯ ಸಿಗುವ ಭರವಸೆ ಇದೆ. ಯಾರು ಕೂಡ ಖಾನಾಪುರ ಬಂದ್, ಪ್ರತಿಭಟನೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಈಕ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಈಗಾಗಲೇ ನನ್ನನ್ನು ಅಮಾನುತು ಮಾಡಿ ಆದೇಶಿಸಲಾಗಿದೆ. ಡಿ.19ರಂದು ಖಾನಾಪುರ ಠಾಣೆಗೆ ಸಿ.ಟಿ.ರವಿರನ್ನ ಕರೆತರಲಾಗಿತ್ತು. ಅಂದು ಆ ಸಮಯದಲ್ಲಿ ಆದ ಘಟನಾವಳಿಗಳಿಗೆ ಸಂಬಂಧಿಸಿದಂತೆ ನನ್ನನ್ನು ಅಮಾನತು ಮಾಡಿದ್ದಾರೆ. ಇಲಾಖೆಯಲ್ಲೇ ನ್ಯಾಯ ಪಡೆಯುತ್ತೇನೆ. ಹೀಗಾಗಿ ಯಾವುದೇ ಬಂದ್, ಪ್ರತಿಭಟನೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.