ಚಿಕ್ಕಮಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ. ರವಿ ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆಂಬ ಆರೋಪ ದೊಡ್ಡ ಮಟ್ಟದ ಕಿಡಿ ಹೊತ್ತಿಸಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಉಪ ಸಭಾಪತಿ, ಎಂ.ಕೆ. ಪ್ರಾಣೇಶ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸಿ.ಟಿ. ರವಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಸಿಟಿ ರವಿ ಅವರನ್ನು ನಡೆಸಿಕೊಂಡ ರೀತಿ ಸರಿಯಲ್ಲ. ಇದೇ ರೀತಿ ಮಾಡಿದರೇ ನಾನು ಹಕ್ಕುಚ್ಯುತಿಗೆ ಹಾಕುತ್ತೇನೆ. ಇದನ್ನ ನಾನು ಖಂಡಿಸುತ್ತೇನೆ. ಒಬ್ಬ ಉಪ ಸಭಾಪತಿಯಾಗಿ ನಾನು ಮಾತನಾಡಬಾರದು. ತನಿಖೆಯಾದರೇ ಸತ್ಯ ಹೊರಬರುತ್ತೆ ಎಂದಿದ್ದಾರೆ.
ಸಭಾಪತಿಗಳು ಏನೇ ನಡೆದರೂ ಪರಿಶೀಲನೆ ನಡೆಸುತ್ತಾರೆ. ನಾನು ಕೂಡ ನಿರಂತರವಾಗಿ ಸಭಾಪತಿಗಳ ಜೊತೆ ಸಂಪರ್ಕದಲ್ಲಿದ್ದೇನೆ. ಸಭಾಪತಿಗಳು ಎಲ್ಲವನ್ನೂ ಪರಿಶೀಲನೆ ನಡೆಸಿದ್ದಾರೆ. ಸದಸನದಲ್ಲಿ ಏನೇ ನಡೆದರೂ ರೆಕಾರ್ಡ್ ಆಗುತ್ತದೆ. ಈ ಕುರಿತು ಕೂಡ ಪರಿಶೀಲನೆ ನಡೆಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯವಾಗಿ ಮಾತನಾಡಿದ್ದಾರೆ. ಮುಖ್ಯಮಂತ್ರಿಯವರ ಮಾತನ್ನು ನಾನು ಖಂಡಿಸುತ್ತೇನೆ ಎಂದು ಆರೋಪಿಸಿದ್ದಾರೆ.