ವಿಜಯಪುರ: ನಗರದಲ್ಲಿ ನಡೆದ “ವಕ್ಫ್ ಹಠಾವೋ ದೇಶ್ ಬಚಾವೊ” ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಿಟಿ ರವಿ ವಕ್ಫ್ ಬೋರ್ಡ್ ಆನ್ಯಾಯದ ವಿರುದ್ಧ ಭರ್ಜರಿಯಾಗಿ ವಾಗ್ದಾಳಿ ನಡೆಸಿದರು.
ಯತ್ನಾಳ್ ಮುಂದಾಳತ್ವದಲ್ಲಿ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಆನೇಕ ಹಿಂದೂಪರ ಮುಖಂಡರು, ಕಾರ್ಯಕರ್ತರು, ಭಾಜಪ ನಾಯಕರು, ಕಾರ್ಯಕರ್ತರು ಸೇರಿದ್ದ ಬೃಹತ್ ಸಮಾವೇಶದಲ್ಲಿ, ಸಿಟಿ ರವಿ, ವಕ್ಫ್ ಬೋರ್ಡ್ ಮತ್ತು ಕೆಲ ಮುಸಲ್ಮಾನ್ ನಾಯಕರನ್ನು ಟಾರ್ಗೆಟ್ ಮಾಡಿಕೊಂಡು, ಮಾತಲ್ಲೇ ಚಾಟಿ ಬೀಸಿದರು. ಹಿಂದುತ್ವದ ವಿಚಾರದಲ್ಲಿ ನೋ ಕಾಂಪ್ರಮೈಸ್ ಎಂದ ಆವರು, ‘ ನಾನಾಗಲಿ, ಯತ್ನಾಳರಾಗಲಿ, ರಾಜಕಾರಣಕ್ಕಾಗಿ ಹಿಂದುತ್ವವಲ್ಲ; ಹಿಂದುತ್ವಕ್ಕಾಗಿ ರಾಜಕೀಯ ಮಾಡುತ್ತೇವೆ’ ಎಂದು ನೆರೆದವರನ್ನು ಹುರಿದುಂಬಿಸಿದರು. ಕೇಸರಿ ಶಾಲು ಕೈಯಲ್ಲಿ ವಿಜಯ ಪತಾಕೆಯಂತೆ ಹಾರಾಡಿಸಿ ಹಿಂದುತ್ವದ ಬಗ್ಗೆ ಗಟ್ಟಿ ಧ್ವನಿಯಾದರು.