ವಿಜಯನಗರ : ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಏಕಾಏಕಿ ಪಲ್ಟಿಯಾದ ಪರಿಣಾಮ ಮೂವರು ಮಕ್ಕಳು ಸೇರಿ 9 ಜನರಿಗೆ ಗಂಭೀರ ಗಾಯವಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಗೋವಿನಕೊಪ್ಪ, ಕೊಣ್ಣೂರ ಗ್ರಾಮದ ನಿವಾಸಿಗಳಾದ ಟ್ಯಾಕ್ಸಿ ಚಾಲಕ ಲಾಲ್ ಸಾಬ್, ಕುಮಾರ್, ಅನ್ನಪೂರ್ಣ, ಬಾಲಕಿಯರಾದ ರಕ್ಷಿತಾ, ಅಕ್ಕಮ್ಮ, ನಂದಿನಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳಾಗಿದ್ದು ಹೊಸಪೇಟೆ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಡಿಕೇರಿಯಲ್ಲಿ ಕಾರ್ಯಕ್ರಮ ಮುಗಿಸಿ, ಹುನಗುಂದಕ್ಕೆ ತೆರಳುತ್ತಿರೋ ವೇಳೆ ಈ ಘಟನೆ ಸಂಭವಿಸಿದೆ. 13 ಜನ ಡ್ರಮ್ ಸೆಟ್ ಬಾರಿಸೋ ಕಲಾವಿದರು ಕಾರ್ಯಕ್ರಮ ಮುಗಿಸಿ ಇನ್ನೊಂದು ಕಾರ್ಯಕ್ರಮಕ್ಕೆ ತೆರಳುವಾಗ ಹೆದ್ದಾರಿ ಬದಿ ಲಾರಿ ನಿಂತಿದ್ದ ಹಿನ್ನೆಲೆ ರಸ್ತೆಯಲ್ಲಿ ತಿರುವು ತೆಗೆದುಕೊಳ್ಳುವಾಗ ಟ್ಯಾಕ್ಸಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಮರಿಯಮ್ಮನಹಳ್ಳಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಗಾಯಾಳುಗಳನ್ನ ಆಸ್ಪತ್ರೆಗೆ ರವಾನಿಸಿದ್ದಾರೆ.
ಇದನ್ನೂ ಓದಿ : ಕ್ಲಾಸಲ್ಲೇ ವಿದ್ಯಾರ್ಥಿನಿಗೆ ‘I LOVE U’ ಎಂದಿದ್ದ ಪ್ರೊಫೆಸರ್ ಅರೆಸ್ಟ್!


















