ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೂ ಬರುವ ಮುನ್ನ ಶಕ್ತಿ ಯೋಜನೆ ಘೋಷಿಸಿತ್ತು. ಈ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಘೋಷಿಸಿತ್ತು. ಹೀಗಾಗಿ ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಮಹಿಳೆಯರು ತುಂಬುತ್ತಿದ್ದಾರೆ.
ಆದರೆ, ಮಹಿಳೆಯೊಂದಿಗೆ ಪುರುಷರು ಓಡಾಟ ನಡೆಸುತ್ತಿದ್ದು, ಕೆಎಸ್ಆರ್ಟಿಸಿಗೆ ಕೋಟಿ ಕೋಟಿ ರೂ. ಆದಾಯ ಹರಿದು ಬರುತ್ತಿದೆ ಎನ್ನಲಾಗಿದೆ.ಜೂನ್ 11 ರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗಾಗಿ ಶಕ್ತಿ ಯೋಜನೆ ಜಾರಿಗೆ ತಂದಿತ್ತು. ಹೀಗಾಗಿ ನಾಲ್ಕು ನಿಗಮದ ಬಸ್ಸುಗಳಲ್ಲೂ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ.
ಆದರೆ, ಮಹಿಳೆಯರೊಂದಿಗೆ ಪುರುಷರೂ ಪ್ರಯಾಣ ನಡೆಸುತ್ತಿದ್ದು, ಸಾರಿಗೆ ಸಂಸ್ಥೆಯ ಖಜಾನೆ ತುಂಬುತ್ತಿದೆ. ಹಿಂದೆ ಕೆಎಸ್ ಆರ್ ಟಿಸಿಯಲ್ಲಿಪ್ರತಿದಿನ 9.7 ಕೋಟಿ ರೂ. ಆದಾಯ ಬರುತ್ತಿತ್ತು. ಈಗ ಪ್ರತಿದಿನ ಸರಾಸರಿ ಆದಾಯ 13.9 ಕೋಟಿ ರೂ. ಆದಾಯ ಬರುತ್ತಿದೆ. ಅಂದರೆ, ಸರಾಸರಿ ಪ್ರತಿ ದಿನ 4.20 ಕೋಟಿ ರೂ. ಆದಾಯ ಏರಿಕೆಯಾಗಿದೆ. ಆದರೆ, ಮೊದಲಿಗಿಂತಲೂ ಖರ್ಚು ವೆಚ್ಚಗಳು ಹೆಚ್ಚಾಗುತ್ತಿವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಹಿಂದೆ ಪ್ರತಿ ತಿಂಗಳು ಸರಾಸರಿ 250 ಕೋಟಿ ರೂ. ಬರುತ್ತಿದ್ದ ಆದಾಯ ಈಗ ಬರೋಬ್ಬರಿ 400 ಕೋಟಿ ರೂ. ಆಗಿದೆ. ಮಹಿಳೆಯರಿಗೆ ಉಚಿತವೆಂದು ಕುಟುಂಬಸ್ಥರೆಲ್ಲ ಸಾರಿಗೆ ಬಸ್ ನಲ್ಲೇ ಪ್ರಯಾಣಿಸುತ್ತಿದ್ದಾರೆ. ಇದೀಗ ಹೊಸ ಬಸ್ ಗಳನ್ನು ಖರೀದಿ ಮಾಡಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಸದ್ಯದಲ್ಲಿಯೇ 1500 ಹೊಸ ಬಸ್ ಗಳು ರಸ್ತೆಗಳಿಯಲಿವೆ. ಹೀಗಾಗಿ ಮಹಿಳಾ ಪ್ರಯಾಣಿಕರು ಖಷಿಯಾಗಿದ್ದಾರೆ.