ಹಾಸನ: ಮಲೆನಾಡಲ್ಲಿ ಒಂದು ಕಡೆ ಮಳೆಯ ಆರ್ಭಟ ಜೋರಾಗಿದ್ರೆ, ಮತ್ತೊಂದು ಕಡೆ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ರೈತನ ಮೇಲೆ ಒಂಟಿ ಸಲಗ ಏಕಾಏಕಿ ದಾಳಿ ಮಾಡಿದೆ.

ತಕ್ಷಣವೇ ಆ ರೈತ ಮರವೇರಿ ತನ್ನ ಪ್ರಾಣ ಉಳಿಸಿಕೊಂಡಿದ್ದಾರೆ. ಈ ಘಟನೆ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಕೋಗೋಡು ಗ್ರಾಮದಲ್ಲಿನಡೆದಿದ್ದು ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಕಾಫಿ, ಅಡಿಕೆ ಗಿಡಗಳನ್ನು ಈ ದೈತ್ಯಾಕಾರದ ಆನೆ ಕಿತ್ತು ಬಿಸಾಡಿದೆ. ಕಾಫಿ ತೋಟದಲ್ಲೇ ಕಾಡಾನೆ ಬೀಡುಬಿಟ್ಟಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆ ಚಲನವಲನದ ಇಟಿಎಫ್ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ.