ಬೈಂದೂರು ತಾಲೂಕಿನ ನಾಗೂರು-ಕೊಡೇರಿ ಎಂಬಲ್ಲಿನ ವಿಶ್ವನಾಥ ಉಡುಪ ಅವರಿಗೆ ಸಂಬಂಧಿಸಿದ ಬಾವಿಯೊಳಗೆ ಮಂಗಳವಾರ ಪತ್ತೆಯಾಗಿದ್ದ ಮೊಸಳೆ ಕೊನೆಗೂ ಸೆರೆಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಬೀಡಿನ ಬಲೆಯನ್ನು ಬಾವಿ ಒಳಗೆ ಬಿಡುವುದರ ಮೂಲಕ ಸುರಕ್ಷಿತವಾಗಿ ಮೊಸಳೆಯನ್ನು ಬುಧವಾರ ಸೆರೆ ಹಿಡಿದರು.

ಬಾವಿಯೊಳಗೆ ಅವಿತುಕೊಂಡಿದ್ದ ಮೊಸಳೆಯನ್ನು ಜೀವಂತವಾಗಿ ಸೆರೆ ಹಿಡಿಯಲು ಮಂಗಳವಾರ ಬೊನ್ ಇಟ್ಟು ಹಲವು ಉಪಕ್ರಮಗಳನ್ನು ಬಳಕೆ ಮಾಡಿದ್ದರು ಯಾವುದೆ ರೀತಿ ಪ್ರಯೋಜನೆ ಆಗಿರಲಿಲ್ಲ.ಸಿಸಿಟಿವಿ ಮೂಲಕ ರಾತ್ರಿಯಿಡಿ ಮೊಸಳೆ ಚಲನವಲನದ ಬಗ್ಗೆ ನಿಗಾ ಇಡಲಾಗಿತ್ತು. ಸ್ಥಳೀಯ ಮೀನುಗಾರರ ಸಲಹೆಯೊಂದಿಗೆ ಬುಧವಾರ ವಿಶೇಷ ಕಾರ್ಯಚರಣೆ ನಡೆಸಿ ಬೃಹತ್ ಗಾತ್ರದ ಮೊಸಳೆಯನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ. ಆರೋಗ್ಯವಂತ ಮೊಸಳೆಯನ್ನು ಸುರಕ್ಷಿತ ಸ್ಥಳಕ್ಕೆ ಬಿಡಲು ಅರಣ್ಯಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ನಿನ್ನೆಯಿಂದ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಪಶು ವೈದ್ಯಾಧಿಕಾರಿಗಳು ಸ್ಥಳೀಯರು, ಅಗ್ನಿ ಶಾಮಕದಳದ ಸಿಬ್ಬಂದಿಗಳು, ಮೀನುಗಾರರು ಭಾಗವಹಿಸಿದ್ದರು.
