ಬೆಂಗಳೂರು | ಕರ್ನಾಟಕದ ಕ್ರಿಕೆಟ್ ಆಟಗಾರ ಹಾಗೂ ಟೀಂ ಇಂಡಿಯಾ ಪೇಸರ್ ವೈಶಾಕ್ ವಿಜಯಕುಮಾರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಗರಿಕಾ ಎಂಬುವವರೊಂದಿಗೆ ಅವರು ಸಪ್ತಪದಿ ತುಳಿದು ಹೊಸ ಜೀವನ ಆರಂಭಿಸಿದ್ದಾರೆ.

ಸರಳ ಹಾಗೂ ಆತ್ಮೀಯ ವಾತಾವರಣದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬದವರು, ಆಪ್ತರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು. ವಿಶೇಷವಾಗಿ ನಟ ಕಿಚ್ಚ ಸುದೀಪ್ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವ ದಂಪತಿಗಳಿಗೆ ಶುಭಾಶಯ ಕೋರಿದರು.

ಮಾಜಿ ಆರ್‌ಸಿಬಿ ಆಟಗಾರನಾದ ವೈಶಾಕ್ ವಿಜಯ್ ಕುಮಾರ್ ಅವರ ಮದುವೆ ಸಮಾರಂಭದ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕ್ರಿಕೆಟ್ ವಲಯದ ಹಲವರು ಹಾಗೂ ಅಭಿಮಾನಿಗಳು ಕೂಡ ನವ ದಂಪತಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ : “ಇರಾನ್ ಮೇಲೆ ದಾಳಿಗೆ ಭಾರತದ ನೌಕಾನೆಲೆ ಬಳಕೆ” ಎಂದ ಅಮೆರಿಕದ ಮಾಜಿ ಅಧಿಕಾರಿ.. ಹಸಿ ಸುಳ್ಳು ಎಂದ ವಿದೇಶಾಂಗ ಇಲಾಖೆ!



















