ಬಾಗಲಕೋಟೆ: ಕಳೆದ 2004ರ ಬೀಳಗಿ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ನಕಲಿ ಮತದಾನ ಪಟ್ಟಿ ಕಾರಣ ಎಂದು ಬೀಳಗಿ ಮತ ಕ್ಷೇತ್ರದ ಕಾಡರಕೊಪ್ಪ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಜೆ.ಟಿ.ಪಾಟೀಲ್ ನಕಲಿ ಮತದಾನದ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.
ಕಳೆದ 21 ವರ್ಷದ ಹಿಂದೆ ನಾನು ಆರೋಪ ಮಾಡಿದ್ದೆ, ಚುನಾವಣೆ ಬಳಿಕ ಮತಪಟ್ಡಿ ಪರಿಷ್ಕರಣೆ ನಡೆಯಿತು. ಅದರಲ್ಲಿ ಬೀಳಗಿ ಮತಕ್ಷೇತ್ರದಲ್ಲಿಯೇ 35400 ಮತಗಳು ನಕಲಿ ಇರುವ ಮಾಹಿತಿ ಹೊರ ಬಂದಿತ್ತು. ನಂತರ ಅಂದಿನ ಐಎಎಸ್ ಅಧಿಕಾರಿ ಶಿವನೇಲ್ ಬುವವರು ನಕಲಿತದಾರರನ್ನು ತಗೆದುಹಾಕಿದರು. ಅಂದು ನನ್ನ ಸೋಲಿಗೆ ನಕಲಿ ಮತದಾರರೇ ಕಾರಣರಾಗಿದ್ದು, ಆ ನಕಲಿ ಮತದಾರರ ಪಟ್ಟಿ ಇಂದಿಗೂ ಡಿಸಿ ಆಫೀಸ್ ನಲ್ಲಿದೆ ಎಂದು ತಿಳಿಸಿದ್ದಾರೆ.
ನಕಲಿ ಮತದಾರರ ಪಟ್ಟಿ ಸೃಷ್ಠಿಸುವುದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತೆ. ಇಂದು ನಕಲಿ ಮತದಾರರ ವಿರುದ್ಧ ನಮ್ಮ ರಾಹುಲ್ ಗಾಂಧಿ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.



















