ಬೆಂಗಳೂರು: ಸರ್ಕಾರಿ ಹುದ್ದೆಗಳನ್ನು ಹುಡುಕುತ್ತಿರುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಖಾಲಿ ಇರುವ ಮೂರು ಹುದ್ದೆಗಳ ನೇಮಕಾತಿಗಾಗಿ (CPCB Recruitment 2025) ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜೂನಿಯರ್ ರಿಸರ್ಚ್ ಫೆಲೊ (JRF) ಹಾಗೂ ಸೀನಿಯರ್ ರಿಸರ್ಚ್ ಫೆಲೊ (SRF) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆಫ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಬೆಂಗಳೂರಿನಲ್ಲೇ ಕೆಲಸ ಹುಡುತ್ತಿರುವವರು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ಮಾಲಿನ್ಯ ನಿಯಂತ್ರಣ ಮಂಡಳಿ
ಒಟ್ಟು ಹುದ್ದೆಗಳು: 03
ಉದ್ಯೋಗ ಸ್ಥಳ: ಬೆಂಗಳೂರು
ಅರ್ಜಿ ಸಲ್ಲಿಕೆ ವಿಧಾನ: ಆಫ್ ಲೈನ್
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 25
ಬಿ.ಇ ಅಥವಾ ಬಿ.ಟೆಕ್ ಅಥವಾ ಎಂ.ಟೆಕ್ ಕೋರ್ಸ್ ಗಳನ್ನು ಮುಗಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ. ಜೂನಿಯರ್ ರಿಸರ್ಚ್ ಫೆಲೊ (JRF) ಎರಡು ಹುದ್ದೆಗಳು ಹಾಗೂ ಸೀನಿಯರ್ ರಿಸರ್ಚ್ ಫೆಲೊ (SRF) ಒಂದು ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ. ಕನಿಷ್ಠ 30ರಿಂದ ಗರಿಷ್ಠ 32 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಜೂನಿಯರ್ ರಿಸರ್ಚ್ ಫೆಲೊ (JRF) ಹುದ್ದೆಗೆ ನೇಮಕಾತಿ ಹೊಂದಿದವರಿಗೆ ಮಾಸಿಕ 37 ಸಾವಿರ ರೂಪಾಯಿ ಹಾಗೂ ಸೀನಿಯರ್ ರಿಸರ್ಚ್ ಫೆಲೊ (SRF) ಹುದ್ದೆಗೆ ನೇಮಕಾತಿ ಹೊಂದಿದವರಿಗೆ ಮಾಸಿಕ 42 ಸಾವಿರ ರೂಪಾಯಿ ಸಂಬಳ ನಿಗದಿಪಡಿಸಲಾಗಿದೆ. ಒಬಿಸಿ, ಎಸ್ಸಿ, ಎಸ್ಟಿ ಹಾಗೂ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.
ಅರ್ಜಿ ಸಲ್ಲಿಸಬೇಕಾದ ವಿಳಾಸ
Regional Director, Central Pollution Control Board, Regional Directorate Bengaluru, “Nisarga Bhawan”, A-Block, 1st & 2nd Floors, Thimmaiah Road, 7th D – Main, Shivanagar, Bengaluru – 560079. ಇಮೇಲ್ ಮೂಲಕ zobangalore.cpcb@nic.in and anjana.cpcb@nic.in ವಿಳಾಸಗಳಿಗೆ ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲೆಗಳನ್ನು ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ cpcb.nic.in ಸಂಪರ್ಕಿಸಿ.