ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಆರ್ಭಟ ಮೀತಿ ಮೀರ್ತಿದೆ. ಅದ್ರಲ್ಲೂ ಬೆಂಗಳೂರಲ್ಲಿ ಮಹಾಮಾರಿ ಎಲ್ಲೆ ಮೀರಿ ವ್ಯಾಪಿಸ್ತಿರೋದು ಆತಂಕ ಹೆಚ್ಚಿಸಿದೆ. ರಾಜಧಾನಿ ಬೆಂಗಳೂರಲ್ಲೇ ಇದೀಗ 71 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಅದ್ರಲ್ಲೂ ಬೆಂಗಳೂರ ದಕ್ಷಿಣದಲ್ಲಿ ಕೋವಿಡ್ ನಿಯಂತ್ರಣ ಮೀರಿ ಮುನ್ನುಗುತ್ತಿರೋದು ಆಘಾತಕಾರಿಯಾಗಿದೆ.
ನಗರದ ಮಹದೇಪುರವನ್ನು ಕೊರೋನಾ ಹಾಟ್ ಸ್ಪಾಟ್ ಅಂತಾ ಗುರುತಿಸಲಾಗಿದ್ದು, ಅತಿ ಹೆಚ್ಚು ಪ್ರಕರಣಗಳು ಈ ವ್ಯಾಪ್ತಿಯಲ್ಲೇ ಪತ್ತೆಯಾಗಿದೆ. ಈಗಾಗಲೇ ನಗರದಲ್ಲಿ ಆರೋಗ್ಯ ಇಲಾಖೆ ತುರ್ತು ಕ್ರಮಗಳನ್ನು ಜಾರಿಗೆ ತಂದಿದ್ದು, ಸಾರಿ ಕೇಸ್ ಗಳ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ. ಇನ್ನೊಂದೆಡೆ, ನಾಳೆಯಿಂದಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ವಾರ್ಡ್ ಗಳ ಮರು ಸೃಷ್ಟಿಗೆ ಚಿಂತಿಸಲಾಗ್ತಿದೆ. ಈ ನಿಟ್ಟಿನಲ್ಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಿರಿಯ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ಮುಂದಿನ ಕಠಿಣ ನಿಯಮಗಳ ಬಗ್ಗೆ ಚರ್ಚೆ ಆರಂಭಿಸಿದ್ದಾರೆ.