ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ಕೆಲವು ಜೋಡಿಗಳು ಲೋಕ ಅದಾಲತ್ ನಲ್ಲಿ ಮತ್ತೆ ಒಂದಾಗಿವೆ.
ಶನಿವಾರ ಕೊಪ್ಪಳದಲ್ಲಿ ನಡೆದ ಲೋಕ ಅದಾಲತ್ ನಲ್ಲಿ ನ್ಯಾಯಾಧೀಶರ ಮುಂದೆ ಬರೋಬ್ಬರಿ 6 ಜೋಡಿಗಳು ಒಂದಾಗಿವೆ. ಕುಷ್ಟಗಿ ಹಾಗು ಕೊಪ್ಪಳದ ನ್ಯಾಯಾಧೀಶರ ಮುಂದೆ ಜೋಡಿಗಳು ಒಂದಾಗಿವೆ.
ಚಳಗೇರಿಯ ಶರಣಮ್ಮ ಹಾಗೂ ಸತೀಶ ಕಳೆದ 15 ವರ್ಷಗಳಿಂದ ದೂರವಾಗಿದ್ದರು. ಶಿರಗುಂಪಿಯ ಮಲ್ಲಪ್ಪ ನಾಯಕ ಹಾಗೂ ಹುಲಗಮ್ಮ 6 ವರ್ಷಗಳಿಂದ ದೂರವಾಗಿದ್ದರು. ಆದರೆ, ನ್ಯಾಯಾಧೀಶರ ಬುದ್ಧಿ ಮಾತಿಗೆ ಈಗ ಮತ್ತೆ ಒಂದಾಗಿ, ಉತ್ತಮವಾಗಿ ಬದುಕು ಕಳೆಯುವುದಾಗಿ ವಾಗ್ದಾನ ಮಾಡಿದ್ದಾರೆ. ಸಂಧಾನದಲ್ಲಿ ಜೋಡಿಗಳು ಒಂದಾಗಿದ್ದಕ್ಕೆ ಹಲವರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.