ಕೋಲಾರ : ಕೋಲಾರದ ಶ್ರೀನಿವಾಸಪುರ ಪಟ್ಟಣದ ದಂಪತಿಗಳು ಹೆತ್ತ ಮಗುವನ್ನೇ ಮಾರಾಟ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ನೀತು ಹಾಗೂ ರಾಘವೇಂದ್ರ ದಂಪತಿಗೆ ಕಳೆದ 5 ದಿನಗಳ ಹಿಂದೆ ಖಾಸಗಿ ನರ್ಸಿಂಗ್ ಹೋಂನಲ್ಲಿ ಜನಿಸಿತ್ತು. ಈಗಾಗಲೇ ಈ ದಂಪತಿಗೆ ಇಬ್ಬರು ಮಕ್ಕಳಿದ್ರು. ಮೂರನೇ ಮಗುವನ್ನು ಈ ದಂಪತಿ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ನೀತು ಎಂಬ ಮಹಿಳೆ ಗಂಡು ಮಗು ಹುಟ್ಟಿದ ಐದೇ ದಿನಕ್ಕೆ ಗಂಡು ಮಗುವನ್ನ 2 ಲಕ್ಷ ಹಣಕ್ಕೆ ಮಾರಾಟ ಮಾಡಿದ್ದಾರೆ ಎಂಬ ಆರೋಪವಿದೆ. ಮಕ್ಕಳ ಮಾರಾಟ ಜಾಲದ ಮಧ್ಯವರ್ತಿಗೆ ಮಗುವನ್ನ ಈ ದಂಪತಿ ನೀಡಿದ್ದಾರೆ.
ಮಗು ಮಾರಾಟ ವಿಚಾರ ತಿಳಿದು ದಂಪತಿಗಳನ್ನ ನಿನ್ನೆ ರಾತ್ರಿಯೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಮಗು ಮಾರಾಟದ ಮಾಹಿತಿ ಸಂಗ್ರಹಿಸಿ, ಮದ್ಯವರ್ತಿ ನಾರಾಯಣಸ್ವಾಮಿ ಎಂಬಾತನನ್ನ ಬಂಧಿಸಲಾಗಿದೆ.
ಮಗುವನ್ನ ಮರಳಿ ವಾಪಾಸ್ ಪಡೆಯಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ದಂಪತಿಯನ್ನ ವಿಚಾರಿಸಿದ್ದು, ಈಗಾಗಲೇ 2 ಮಕ್ಕಳ ತಾಯಿಯಾಗಿರೋ ನೀತು ದಂಪತಿಗೆ ಮತ್ತೊಂದು ಮಗು ಬೇಡವೆಂದು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ | ಗಾಯಾಳು ಹರ್ಷಿತ್ ರಾಣಾ ಔಟ್.. ಸಿರಾಜ್ಗೆ ಬುಲಾವ್!



















